ಗ್ರಾಪಂ ಅಧ್ಯಕ್ಷ ಡಾ. ಕುಂಬಾರ ದಿನಸಿ ಕಿಟ್ ವಿತರಣೆ
ಚಿಕ್ಕೋಡಿ 31: ತಾಲೂಕಿನ ಬೆಳಕೂಡ ಗ್ರಾಮದ ಸುಮಾರು 700 ಕುಟುಂಬಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಡಾ. ಬಸವರಾಜ ಕುಂಬಾರ ದಿನಸಿ ಕಿಟ್ ಹಂಚಿಕೆ ಮಾಡಿದರು.
ಕಳೆದ ಒಂದು ತಿಂಗಳಿಂದ ಗ್ರಾಮ ಕೊರೊನಾದಿಂದ ಲಾಕಡೌನ ಆಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಮದ ಪ್ರತಿಯೊಂದು ಕುಟುಂಬಕ್ಕೆ ಬೇಕಾಗುವ ಪಡಿತರ ಕಿಟ್ ನೀಡಿ ಮಾನವೀಯತೆ ಮೆರೆದರು.
ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಅರಭಾವಿ ಮಾತನಾಡಿ, ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ಹೊರಗೆ ಹೋಗದೇ ಮನೆಯಲ್ಲಿದ್ದುಕೊಂಡು ಸರಕಾರದ ಮಾರ್ಗಸೂಚಿ ಪಾಲಾನೆ ಮಾಡಿದ್ದಾರೆ. ಜನರಿಗೆ ಪಡಿತರ ತೊಂದರೆ ಆಗದಂತೆ ಗ್ರಾ,ಪಂ ಅಧ್ಯಕ್ಷ ಡಾ, ಬಸವರಾಜು ಕುಂಬಾರ ಅವರು ಹೃದಯ ಶ್ರೀಮಂತಿಕೆ ಇಟ್ಟುಕೊಳ್ಳುವ ಮೂಲಕ ಗ್ರಾಮದ ಪ್ರತಿ ಕುಟುಂಬಕ್ಕೆ ದಿನಸಿ ಕಿಟ್ ನೀಡಿ ಸಮಜಕ್ಕೆ ಸೇವೆಗೆ ಅಣಿಯಾಗಿದ್ದಾರೆ ಎಂದರು.
ಡಾ, ಬಸವರಾಜ ಕುಂಬಾರ ಅವರು ಕೇವಲ ದಿನಸಿ ಕಿಟ್ ನೀಡದೇ ವೃತ್ತಿಯಲ್ಲಿ ವೈದ್ಯರಾಗಿದ್ದು, ಗ್ರಾಮದಲ್ಲಿ ಕೊರೊನಾ ಹಬ್ಬದಂತೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಗ್ರಾಮದ ಸೊಂಕಿತರ ಕುಟುಂಬಗಳಿಗೆ ದೈರ್ಯ ತುಂಬುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಕಠಿಬದ್ಧರಾಗಿದ್ದಾರೆ ಎಂದರು.
ಪಿಡಿಒ ಎಂ.ಬಿ.ಕಿಲ್ಲೆದಾರ, ದೇವರಾಜ ಪಾಶ್ಚಾಪೂರೆ, ಮಲ್ಲಿಕಾರ್ಜುನ ಬೀಡ್, ಶಂಕರ ಗಿರಿಜಾಯಿ, ಮಲ್ಲಪ್ಪ ಅರಭಾವಿ, ಬಸವಣ್ಣಿ ಕವಣಿ, ಶಿವು ಮುಗಳಿ, ಚಂದ್ರು ನಿಂಗಪ್ಪಗೋಳ, ಮಹಂತೇಶ ಚೌಹ್ವಾನ, ರಾಜು ಹಿರೇಮಠ, ಅನಿಲ ಮೋರೆ, ಮಹಾಂತೇಶ ಯಶವಂತಗೋಳ, ಸಂಭಾ ಚೌಹ್ವಾನ ಮುಂತಾದವರು ಇದ್ದರು.