ರಾಣೆಬೆನ್ನೂರ

ಗ್ರಾಪಂ ಮಟ್ಟದ ಘನ ತ್ಯಾಜ್ಯ ನಿರ್ವಹಣೆ ತರಬೇತಿ

ಗ್ರಾಪಂ ಮಟ್ಟದ ಘನ ತ್ಯಾಜ್ಯ ನಿರ್ವಹಣೆ ತರಬೇತಿ
ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದಸಹಿ ಸಂಗ್ರಹಣೆ ಬೆಂಗಳೂರು

ರಾಣೇಬೆನ್ನೂರು 24: ಜಿಲ್ಲಾ ಪಂಚಾಯತ್ ಹಾವೇರಿ, ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಪಂಚಾಯತ್‌ರಾಜ್ ಇಲಾಖೆ, ನವೋದಯ ಶಿಕ್ಷಣ ಮತ್ತು ಪರಿಸರಅಭಿವೃದ್ಧಿ ಸೇವಾ ಸಂಸ್ಥೆ (ನೀಡ್ಸ್‌) ರಾಣೇಬೆನ್ನೂರು ಹಾಗೂ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೊಪಾಯ ಮತ್ತುಕೌಶಲ್ಯಾಭಿವೃದ್ದಿ ಇಲಾಖೆಇವರ ಸಹಯೋಗದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಹಿಳೆಯರಿಗೆ ಘನ ತ್ಯಾಜ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ ಕುರಿತು ಐದು ದಿನಗಳ ತರಬೇತಿ ಕಾರ್ಯಗಾರವನ್ನು ರಾಣೇಬೆನ್ನೂರಿನ ಮೆಟ್ರಿಕ್ ಪೂರ್ವ ಬಾಲಕೀಯರ ವಸತಿ ನಿಲಯದಲ್ಲಿ ಪ್ರಾರಂಭಿಸಲಾಯಿತು. 

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಹಾವೇರಿ ಸಹನಿರ್ದೇಶಕರಾದ ರಾಮಪ್ಪ ಪೂಜಾರ್ ಉದ್ಘಾಟಿಸಿದರು, ನೀಡ್ಸ್‌ ಸಂಸ್ಥೆಯ ಅಧ್ಯಕ್ಷರಾದ ಮನಮಾಲಾ ತುಮ್ಮಿನಕಟ್ಟಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಾಳಾಗಿ ಪೋಲೀಸ್ ಇಲಾಖೆಯ ಪಿ.ಎಸ್‌.ಐ. ಕೆ.ಸಿ. ಕೋಮಲಾಚಾರಿ, ಎಂ.ಜಿ.ಐ.ಆರ್‌.ಇ.ಡಿ. ಬೆಂಗಳೂರಿನ ನಾಗರಾಜ್, ಸಮಾಜ ಕಲ್ಯಣ ಇಲಾಖೆಯ ಮಮತ, ಎನ್‌.ಆರ್‌.ಎಲ್‌.ಎಂ. ವಲಯ ಮೇಲ್ವಿಚಾ ರಕರಾದ ಹನುಮಂತಪ್ಪ ಸಾರತಿ, ನೀಡ್ಸ ಸಂಸ್ಥೆಯ ಸಿ.ಇ.ಓ ಎಚ.ಎಫ್‌.ಅಕ್ಕಿ ಮತ್ತು 10 ಗ್ರಾಮ ಪಂಚಾಯತಿಯ ಮಹಿಳಾ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನುತಿಪ್ಪೇಶಪ್ಪಕನ್ನಮ್ಮನವರ್ ಸ್ವಾಗತಿಸಿ, ಪರಶುರಾಮ ವಂದಿಸಿದರು. 

ಸುದ್ದಿ ಓದಿ