ನಮ್ಮನ್ನು ಆಳುವ ಸರ್ಕಾರಗಳು ನಮ್ಮ ಅಭಿವೃದ್ಧಿಗಾಗಿ ಗಮನ ಕೊಡುತ್ತಿಲ್ಲ : ನದಾಫ
ಶಿಗ್ಗಾವಿ 10: ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ನಿರಂತರವಾಗಿ 40 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದು ನಮ್ಮನ್ನು ಆಳುವ ಸರ್ಕಾರಗಳು ಕೇವಲ ನಮ್ಮನ್ನು ಬಳಕೆ ಮಾಡಿಕೊಂಡು ನಮ್ಮ ಅಭಿವೃದ್ಧಿಗಾಗಿ ಗಮನ ಕೊಡುತ್ತಿಲ್ಲ ರಾಜ್ಯ ಪಿಂಜಾರ ಸಂಘದ ರಾಜ್ಯಾಧ್ಯಕ್ಷ ಜಲೀಲಸಾಬ ನದಾಫ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಭವನದಲ್ಲಿ ನಡೆದ ಪಿಂಜಾರ ರಾಜ್ಯ ಸಮಿತಿ ಪದಗ್ರಹಣ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮಾಜಿ ಶಾಸಕ ಖಾದ್ರಿ ಮಾತನಾಡಿ ಕೊಡುವನ ಮೇಲಿದ್ದಾನೆ ನಾವು ಪಡೆದುಕೊಳ್ಳುವವರು ನಾವು ನಮ್ಮ ಮಕ್ಕಳಿಗೆ ಒಳ್ಳೆಯ ನೈತಿಕ ಶಿಕ್ಷಣ ನೀಡೋಣ ಅಲ್ಲದೇ ಮಕ್ಕಳನ್ನು ಉನ್ನತ ಶಿಕ್ಷಣ ನೀಡಿ ಅವರನ್ನು ಉನ್ನತ ಅಧಿಕಾರಿಗಳಾನ್ನಾಗಿ ಮಾಡೋಣ ಹಾಗೂ ಎಲ್ಲವನ್ನು ಕೋಡುವನು ಮೇಲಿದ್ದಾನೆ ಆದ್ದರಿಂದ ಸಾಧ್ಯವಾದಷ್ಟು ಒಳ್ಳೆಯ ಕೆಲಸ ಮಾಡೋಣ ಎಂದರು.
ಯಾಶೀರಖಾನ ಪಠಾಣ ಮಾತನಾಡಿ ನಾವು ಖುರಾನ ಪಠಣ ಮಾಡುತ್ತೇವೆ ನಾವು ಸುಳ್ಳು ವಂಚನೆ ಮಾಡುವುವರಿಗೆ ಪ್ರೋತ್ಸಾಹ ನೀಡಬಾರದು. ಅನೇಕ ನಮ್ಮ ಸಮಾಜದದವರು ಅನೇಕ ರಂಗಗಳಲ್ಲಿ ಪರಿಣಿತಿ ಪಡೆದಿದ್ದಾರೆ ಆದರೆ ಮುಖ್ಯವಾಹಿನಿಗೆ ಬರುತ್ತಿಲ್ಲ ಆದ್ದರಿಂದ ನಾವು ಹಾಗೂ ನಮ್ಮ ಸಮಾಜವನ್ನು ಮುಂದೆ ಕರೆದುಕೊಂಡು ಹೋಗುವ ಕೆಲಸ ಸಮಾಜದ ಮುಂಚಣಿ ನಾಯಕರು ಮಾಡಬೇಕು. ನಮ್ಮ ಮಕ್ಕಳಿಗೆ ನಾವು ಬೇರೆಯವರ ಮಕ್ಕಳಂತೆ ಒಳ್ಳೆಯ ಶಿಕ್ಷಣ ನೀಡಬೇಕು ನಂತರ ಅವರಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಉಪಚುನಾವಣೆ ನಂತರ ನಿಮ್ಮ ಸಮಾಜದ ಸಮಸ್ಯೆಯನ್ನು ನಾವು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ಬೂಡಾಟಿಕೆ ಮಾತುಗಳನ್ನು ಆಡುವ ನಾಯಕರು ಮತ್ತು ಮುಖಂಡರನ್ನು ನಂಬಬೇಡರಿ ಅಲ್ಲದೇ ನಿರಂತರವಾಗಿ ಹೋರಾಟ ಮಾಡಿದಾಗ ಜಯ ಲಭಿಸುತ್ತದೆ ಎಂದರು.
ಸಿ.ಎಂ.ಪೈಜ ಮಾತನಾಡಿ ಕುಲ ಕುಲ ಎಂದು ಬಡೆದ್ಯಾಡದೇ ನಿಮ್ಮ ಸಮಾಜದ ಸಂಘಟನೆಗೆ ಒತ್ತನ್ನು ಕೊಡಿರಿ ಇಲ್ಲದೇ ಹೋದರೇ ನಾವು ನೀವು ಎಲ್ಲ ಸಂವಿಧಾನದ ಶಕ್ತಿಯನ್ನು ತೋರಿಸಬೇಕು. ಅಂದರೆ ನಾವು ನೀವು ಸಂಘಟನೆ ಬಲಪಡಿಸಬೇಕು ಬಲಪಡಿಸದಿದ್ದರೆ ಮುಂದೆ ಉಗ್ರವಾದ ಹೋರಾಟವನ್ನು ಮಾಡಬೇಕು ಎಂದರು. 10 ಕೋಟಿ ಅನುದಾನವನ್ನು ನಿಗಮಕ್ಕೆ ಕೊಡಲು ಒತ್ತಾಯಿಸೋಣ ಹಾಗೂ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣಕ್ಕಾಗಿ ವಿಶೇಷ ಅನುಧಾನ ಪಡೆಯೋಣ ಎಂದರು.
ಮಾಜಿ ಸಚಿವ ಆರ್ ಶಂಕರ ಮಾತನಾಡಿ ನದಾಫ ಸಮುದಾಯದ ಹಲವಾರು ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅಲ್ಲದೇ ನದಾಫ ನಿಗಮ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಸರಕಾರದ ಗಮನಕ್ಕೆ ತರುತ್ತೇವೆ ಎಂದರು. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದರು.
ಸಿದ್ದಾರ್ಥಗೌಡ ಪಾಟೀಲ, ತಿಪ್ಪಣ್ಣ ಸಾತಣ್ಣವರ, ಸಂಜೀವಕುಮಾರ ನೀರಲಗಿ, ಶಿವಾನಂದ ರಾಮಗೇರಿ, ಸಂಗಮೇಶ ಕಂಬಾಳಿಮಠ, ರಾಜು ಕುನ್ನೂರ, ಗುರುನಗೌಡ ಪಾಟೀಲ, ಜಾಕೀರ ಹುಸೇನ, ಅಬ್ದುಲಮಜೀದ ಮಾಳಗಿಮನಿ, ಪೀರಸಾಬ ನದಾಫ, ಶರೀಫಸಾಬ ನಧಾಪ ಸೇರಿದಂತೆ ನಧಾಪ ಸಮಾಜದ ಸರ್ವ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.ಎಂ.ಹೆಚ್.ಬೇಂಡಿಗೇರಿ ಸ್ವಾಗತಿಸಿದರು. ಶಿಕ್ಷಕ ರಟ್ಟಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.