ರಾಣೆಬೆನ್ನೂರ

ಸರ್ಕಾರಗಳು ರೈತರ ಹೀತಾಶಕ್ತಿ ಮರೆತಿವೆ : ದಿವಿಗಿಹಳ್ಳಿ

ಸರ್ಕಾರಗಳು ರೈತರ ಹೀತಾಶಕ್ತಿ ಮರೆತಿವೆ : ದಿವಿಗಿಹಳ್ಳಿ

ಲೋಕದರ್ಶನ ವರದಿ 


ರಾಣೇಬೆನ್ನೂರು 26: ಸರ್ಕಾರಗಳು ರೈತರ ಹಿತಾಶಕ್ತಿಯನ್ನು ಕಾಪಾಡದೆ ಪ್ರತಿಯೊಂದು ಹಂತದಲ್ಲಿಯೂ ರೈತರನ್ನು ನಿತ್ಯವು ಶೋಷಣೆಗೂಳಪಡಿಸುತ್ತಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಇಂದು ರೈತ ಸಂಘಟನೆಯ ಗ್ರಾಮ ಘಟಕಗಳ ಅವಶ್ಯಕತೆ ತುಂಬಾ ಇದೆ ಎಂದು ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದಿವಿಗಿಹಳ್ಳಿ ಹೇಳಿದರು.  

       ಅವರು ತಾಲೂಕಿನ ಕಾಕೋಳು ಗ್ರಾಮದಲ್ಲಿ ಇತ್ತೀಚೆಗೆ ಸಂಘದ ಗ್ರಾಮ ಘಟಕದ ನಾಮಫಲಕ ಉದ್ಘಾಟಿಸಿ ಮಾತನಾಡಿದರು. ಸಾಲ, ಸೂಲ ಮಾಡಿ ಬೀಜ ಗೂಬ್ಬರ ತರಬೇಕು. ಕಷ್ಟಪಟ್ಟು ಅಪಾರ ಹಣವನ್ನು ಖರ್ಚು ಮಾಡಿ ಬಿತ್ತನೆ ಕಾರ್ಯ ಮಾಡಬೇಕು. ನಂತರ ಮಳೆಗಾಗಿ ಕಾಯಬೇಕು, ಇದು ರೈತರ ಹಣೇಬರಹ ಯಾವ ಜನ್ಮದಲ್ಲಿ ನಾವು ಪಾಪ ಮಾಡಿದ್ದಿವೇ ಎನ್ನುವುದೇ ತಿಳಿಯದಂತಾಗಿದೆ ಎಂದು ವಿಷಾದಿಸಿದರು.  

     ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೂಳಿಸಿರುವುದಾಗಿ ಅಂದಿನಿಂದ ಇಂದಿನವರೆಗೂ ಹೇಳುತ್ತಲೇ ಸಾಗಿದೆ. ಯಾವ ರೈತ ಉದ್ದಾರಾಗಿದ್ದಾನೆ ಎನ್ನುವುದಾದರೂ ಈ ಸರ್ಕಾರಗಳು ಹೇಳಬೇಕಾಗಿದೆ. ನಿತ್ಯವು ಒಂದಿಲ್ಲಾ ಒಂದು ಸಮಸ್ಯೆಯಿಂದ ಆತ್ಮ ಸ್ಥೈರ್ಯ ಕಳೆದುಕೂಳ್ಳುತ್ತಿರುವ ರೈತರು ಬದುಕಿನ ಮತ್ತು ಭವಿಷ್ಯದ ದಾರಿ ಕಾಣದೆ ಆತ್ಮ ಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರಗಳಿಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ ಎಂದು ಕಿಡಿ ಕಾರಿದ ಮುಖಂಡರು ಕೊಡಲೇ ಎಚ್ಚೆತ್ತುಕೊಂಡು ರೈತರಿಗೆ ಬೆಳೆ ಹಾನಿ, ಸತ್ತ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.  

ನೂತನ ಘಟಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಮುಖಂಡ ಚಂದ್ರಣ್ಣ ಉಪ್ಪಿನ ಅವರು ಸಂಘದ ಪದಾದಿಕಾರಿಗಳಿಗೆ ಗುರುತಿನ ಚಿಟಿಗಳು ವಿತರಿಸಿ ನೂತನ ಸಂಘಕ್ಕೆ ಶುಭ ಹಾರೈಸಿದರು. ಗ್ರಾಮದ ಮುಖಂಡರಾದ ದಯಾನಂದ ಜಾದವ್, ಜಿಲ್ಲಾ ಕಾರ್ಯದರ್ಶಿ ಫಕ್ಕಿರೇಶ ಕಾಳೆ, ತಾಲೂಕಾ ಅಧ್ಯಕ್ಷ ಚಂದ್ರ​‍್ಪ ಕುದರಿಹಾಳ, ಗ್ರಾಮ ಘಟಕದ ಅಧ್ಯಕ್ಷ ನಾಗರಾಜ ಕುದರಿಹಾಳ, ಪ್ರಕಾಶ ಗುತ್ತಲ, ಶಿವಪ್ರಕಾಶ ಕೊಂಬಳಿ, ಗೌರವಾಧ್ಯಕ್ಷ ಚಂದ್ರಣ್ಣ ಪಾಟೀಲ, ಉಪಾಧ್ಯಕ್ಷ ಬಸವರಾಜ ದೂಡ್ಡದಿಳ್ಯಪ್ಪನವರ, ಚನ್ನಬಸಪ್ಪ ಕೊಂಬಳಿ, ಶಂಕ್ರ​‍್ಪ ಪಾಟೀಲ, ಕರಿಯಪ್ಪ ಹಳ್ಳಳ್ಳಿ, ಸಂತೋಷ ಸೂರಣಗಿ,  ಖಜಾಂಚಿ ಗುಡ್ಡಪ್ಪ ಸೂರಣಗಿ ಖಜಾಂಚಿ, ಕಾರ್ಯದರ್ಶಿ ಜಗದೀಶ ಕೂಂಬಳಿ ಸೇರಿದಂತೆ ಮತ್ತಿತರೆ ಪದಾದಿಕಾರಿಗಳು ರೈತ ಮುಖಂಡರು ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ