ರಾಣೆಬೆನ್ನೂರ

ಶಾಲಾ-ಕಾಲೇಜುಗಳಲ್ಲಿರುವ ಸಮಸ್ಯೆಗಳಿಗೆ ಸರ್ಕಾರ ಶೀಘ್ರ ಪರಿಹಾರ ಕಂಡುಕೊಳ್ಳಲಿದೆ: ಲಮಾಣಿ

ಶಾಲಾ-ಕಾಲೇಜುಗಳಲ್ಲಿರುವ ಸಮಸ್ಯೆಗಳಿಗೆ ಸರ್ಕಾರ ಶೀಘ್ರ ಪರಿಹಾರ ಕಂಡುಕೊಳ್ಳಲಿದೆ:  ಲಮಾಣಿ

ರಾಣೇಬೆನ್ನೂರು:  ರಾಜ್ಯದಲ್ಲಿನ ಖಾಸಗಿ, ಅನುದಾನಿತ, ಅನುದಾನ ರಹಿತ, ಶಾಲಾ ಕಾಲೇಜುಗಳ ಮತ್ತು ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಸರ್ಕಾರವು ಶೀಘ್ರವೇ ಎಲ್ಲ ರೀತಿಯ ಪರಿಹಾರವನ್ನು ಕಂಡುಕೊಳ್ಳಲಿದೆ ಎಂದು ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

 ಬಿ ಎ ಜೆ ಎಸ್ ಎಸ್ ಕಾಲೇಜು ಸನದಿ ಸಭಾಭವನದಲ್ಲಿ, ನಡೆದ ನೂತನ ಉಪ ಸಭಾಪತಿ  ಹಾವೇರಿಯ  ಶಾಸಕ,  ರುದ್ರಪ್ಪ ಲಮಾಣಿ ಹಾಗೂ ಶಾಸಕ ಪ್ರಕಾಶ್ ಕೋಳಿವಾಡ ಅವರ ಅಭಿನಂದನಾ ಮತ್ತು ಪಿಯು ವಿದ್ಯಾರ್ಥಿಗಳ ಸ್ವಾಗತ, ಎನ್ಎಸ್ಎಸ್, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ   ಸಮಾರಂಭದಲ್ಲಿ ಆಡಳಿತದ ಗೌರವ ಸ್ವೀಕರಿಸಿ  ಮಾತನಾಡಿದರು.           1995 ರ ನಂತರದಲ್ಲಿ ಪ್ರಾರಂಭವಾದ ಶಾಲಾ ಕಾಲೇಜುಗಳಿಗೆ ಅನುದಾನ ನೀಡುವುದು ಮತ್ತು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಈಗಾಗಲೇ ಉಭಯ ಸದನಗಳಲ್ಲಿ ಚರ್ಚಿಸಲಾಗಿದ್ದು ಶೀಘ್ರದಲ್ಲಿಯೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದರು.         

  ಸಮಾರಂಭವನ್ನು ಉದ್ಘಾಟಿಸಿದ ಆಡಳಿತ ಅಧಿಕಾರಿ ಡಾ : ಆರ್ಎಂ ಕುಬೇರಪ್ಪ ಅವರು ಮಾತನಾಡಿ, ವಾಣಿಜ್ಯ ನಗರದ ಈ ಸಂಸ್ಥೆಯಲ್ಲಿ ಸತತ 23 ವರ್ಷಗಳ ಕಾಲ, ಪಿಯು ಕಾಲೇಜು ಯಾವುದೇ ಅನುದಾನವಿಲ್ಲದೆ ಸೇವೆ ಸಲ್ಲಿಸುತ್ತಿದ್ದೇವೆ, ಕೂಡಲೇ ಈ ಮಹಿಳಾ ಪದವಿ ಪೂರ್ವ ಕಾಲೇಜನ್ನು ಅನುದಾನಕ್ಕೆ ಒಳಪಡಿಸ ಬೇಕೆಂದು ಅವರು ಉಪಸಭಾಪತಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಕ್ರಿಯೆಸಿದ ರುದ್ರಪ್ಪ ಲಮಾಣಿ ಅವರು, ಈ ಕುರಿತು  ಶಿಕ್ಷಣ ಸಚಿವರೊಂದಿಗೆ ಹಾಗೂ ಮುಖ್ಯಮಂತ್ರಿಗಳಲ್ಲಿ ಕೋರಿ ಬೇಡಿಕೆಯನ್ನು ಈಡೇರಿಸುವದಾಗಿ ಭರವಸೆ  ನೀಡಿದರು. ಸನ್ಮಾನ ಸ್ವೀಕರಿಸಿದ ಶಾಸಕ ಪ್ರಕಾಶ್ ಕೋಳಿವಾಡ ಅವರು, ವಿದ್ಯಾರ್ಥಿಗಳು ಭವಿಷ್ಯದ ನಾಗರಿಕರು. ತಮ್ಮ ನಿತ್ಯದ ಬದುಕಿನಲ್ಲಿ  ಶಿಕ್ಷಣದ ಜೊತೆಗೆ ಚಟುವಟಿಕೆಗಳನ್ನು ಸಕ್ರಿಯವಾಗಿ ಅಳವಡಿಸಿಕೊಂಡು ವ್ಯಕ್ತಿತ್ವವನ್ನು ನಿರೂಪಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದರು.       

 ಶೈಕ್ಷಣಿಕ ಸಲಹೆಗಾರ ಪ್ರೊ :ಎಚ್.ಎ. ಭಿಕ್ಷಾವರ್ತಿಮಠ ಅವರು ಅಭಿನಂದನಾ ಭಾಷಣ ಮಾಡಿದರು. ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಅಸುಂಡಿ ನಾಗರಾಜ ಬಣಕಾರ್ ಉಪನ್ಯಾಸ ನೀಡಿದರು. ಕಾಲೇಜು ಪ್ರಾಚಾರ್ಯ ಹೆಚ್.ಬಿ. ಪಟ್ಟಣಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಪ್ರಾಚಾರ್ಯರು, ಉಪನ್ಯಾಸಕರು ಮುಖ್ಯೋಪಾಧ್ಯಾಯರು ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಸವಿತಾ ಸಂಗಡಿಗರು ಪ್ರಾಥರ್ಿಸಿದರು. ಗೀತಾ ಉಜನಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಮಡಿವಾಳರ ನಿರೂಪಿಸಿ, ಪೂರ್ಣಿ ಮಾ ಕಾಂಬಳೆ ವಂದಿಸಿದರು. 

ಸುದ್ದಿ ಓದಿ