ಬ್ಯಾಡ್ಗಿ

ರೇಷ್ಮೆ ಕೃಷಿಗೆ ಸರ್ಕಾರದಿಂದ ಸಹಾಯಧನ: ಶಾಸಕ ಬಸವರಾಜ ಶಿವಣ್ಣನವರ

ರೇಷ್ಮೆ ಕೃಷಿಗೆ  ಸರ್ಕಾರದಿಂದ  ಸಹಾಯಧನ: ಶಾಸಕ ಬಸವರಾಜ ಶಿವಣ್ಣನವರ

ಬ್ಯಾಡಗಿ 23: ರೇಷ್ಮೆ ಕೃಷಿಯನ್ನು ಪುನಶ್ಚೆತನಗೊಳಿಸುವ ನಿಟ್ಟಿನಲ್ಲಿ ಹಲವಾರು ಸುಧಾರಿತ ಕ್ರಮಗಳನ್ನು ರೇಷ್ಮೆ ಇಲಾಖೆ ಕೈಗೊಂಡಿದೆ. ರೇಷ್ಮೆ ಕೃಷಿ ವಿಸ್ತರಿಸಲು ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರು ಇದನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ್ ಅಭಿಪ್ರಾಯ ಪಟ್ಟರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ2025-26 ನೇ ಸಾಲಿನ ಕೃಷಿ ಇಲಾಖೆಯ ಕೇಂದ್ರ ರೇಷ್ಮೆ ಮಂಡಳಿಯ ಸಂಯೋಗದೊಂದಿಗೆ ಕೇಂದ್ರ ಪುರಸ್ಕೃತ ಸಿಲ್ಕ್‌ ಸಮಗ್ರ 2 ಯೋಜನೆ ಅಡಿ ಅನುಷ್ಠಾನಗೊಳ್ಳುತ್ತಿರುವ ಒಂದು ಸಾವಿರ ಚದರಡಿ ರೇಷ್ಮೆ ಹುಳು ಸಾಕಾಣಿಕ ಮನಿ ನಿರ್ಮಾಣಕ್ಕೆ ಸಾಮಾನ್ಯ ಗಿರಿಜನ ಮತ್ತು ವಿಶೇಷ ಘಟಕ ಯೋಜನೆ ಅಡಿ ನ ರೇಷ್ಮೆ ಸಾಕಾಣಿಕ ಶೆಡ್ ನಿರ್ಮಾಣ ಮಾಡಿದ  ರೈತರಿಗೆ ಸಹಾಯಧನ ಚೆಕ್ಕನ್ನು ವಿತರಣೆ ಮಾಡಿ ಮಾತನಾಡಿದರು. ರೇಷ್ಮೆ ಇಲಾಖೆ ಅಧಿಕಾರಿ ಭಾರತಿ ನಾಯಕ್ ಮಾತನಾಡಿ ಒಟ್ಟು 11 ರೈತರನ್ನು ಆಯ್ಕೆ ಮಾಡಲಾಗಿದೆ ಎಂದರು ಸಾಮಾನ್ಯ ವರ್ಗಕ್ಕೆ 3, 37.500.ರೂ ಗಳು ಪರಿಶಿಷ್ಟ ಜಾತಿ ರೈತರಿಗೆ 4, 05, 000.ರೂ ಗಳು ಸಹಾಯಧನ ಸರ್ಕಾರ ನೀಡಲಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಮುಖಂಡ ನಾಗರಾಜ್ ಅನ್ವೇರಿ. ಸಹಾಯಧನ ಪಡೆದ ರೈತರ ಶಿವರಾಜ್ ಕುಮಾರ್ ಹಿರೇಮಠ. ಗುರುನಾಥ್ ನಾಗಪ್ಪ ಅಂಗಡಿ. ರಾಮಪ್ಪ ಬಸಪ್ಪ ಶಿಗ್ಗಾವಿ. ಹುಚ್ಚಪ್ಪ ದಿಲ್ಲೇಪ್ಪ ಮೆಡ್ಲೇರಿ. ಬಸಪ್ಪ ಮಲ್ಲಪ್ಪ ಬಣಕಾರ್‌. ಪವಿತ್ರ ಮಲ್ಲಿಕಾರ್ಜುನ್ ಸುರಣಗಿ. ನಿಂಗನ ಗೌಡ್ರು ಪಾಟೀಲ್‌. ಇನ್ನೂ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ