ರಾಷ್ಟ್ರೀಯ

ಬಿಹಾರ: ಸರ್ಕಾರ ರಚನೆಗೆ ಪ್ರಯತ್ನ ಬಿಡದ ಆರ್ ಜೆ ಡಿ ಘಟಬಂಧನ್

ಬಿಹಾರ: ಸರ್ಕಾರ  ರಚನೆಗೆ ಪ್ರಯತ್ನ ಬಿಡದ ಆರ್  ಜೆ ಡಿ  ಘಟಬಂಧನ್

ಪಾಟ್ನಾ, ನವೆಂಬರ್  12: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿ ಎ  ಸ್ಪಷ್ಟಬಹುಮತ ಪಡೆದು ಸರಕಾರ ರಚನೆಯ ಉಮೇದಿನಲ್ಲಿ ಇದ್ದರೂ  ಮತ್ತೊಂದೆಡೆ ಆರ್ ಜೆ ಡಿ  ನೇತೃತ್ವದ ಮಹಾಘಟಬಂಧನ್ ಸಹ  ಸರಕಾರ ರಚನೆಯ ವಿಶ್ವಾಸವನ್ನು ಕಳೆದುಕೊಂಡಿಲ್ಲ. 

ಆರ್ ಜೆಡಿ  ಹಳೆಯ   ಎನ್ ಡಿ ಎ,    ಮೈತ್ರಿಕೂಟದಲ್ಲಿದ್ದ   ಪಕ್ಷಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.ಆರ್ಜೆಡಿ ಒಟ್ಟು ಚುನಾವಣೆಯಲ್ಲಿ  110 ಸ್ಥಾನಗಳನ್ನು ಗೆದ್ದುಕೊಂಡಿದ್ದು, ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು ಇನ್ನೂ 12 ಸ್ಥಾನಗಳ  ಕೊರತೆಯಿದೆ.

ಎಐಎಂಐಎಂ(ಐದು ಸೀಟುಗಳು), ಮಾಜಿ ಸಿಎಂ ಜಿತನ್ ರಾಮ್ ಮಂಜಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ(ಜಾತ್ಯತೀತ) ಹಾಗೂ ಮುಕೇಶ್ ಸಹಾನಿ ನೇತೃತ್ವದ ವಿಕಾಸಶೀಲ ಇನ್ಸಾನ್ ಪಾರ್ಟಿ(ವಿಐಪಿ)ಪಕ್ಷಗಳೊಂದಿಗೆ ಆರ್ಜೆಡಿ ಸಂಪರ್ಕದಲ್ಲಿದೆ. 

ಸಹಾನಿ ಸ್ವತಃ ಸೋಲುಂಡಿದ್ದರೂ ವಿಐಪಿ ಪಕ್ಷ ಹಾಗೂ ಎಚ್ಎಎಂ(ಎಸ್)ಪಕ್ಷ ತಲಾ ನಾಲ್ಕು ಸೀಟುಗಳನ್ನು ಗೆದ್ದಿವೆ. ಈ ಎರಡು ಪಕ್ಷಗಳು ಈ ಹಿಂದೆ ಮಹಾಘಟಬಂಧನದಲ್ಲಿದ್ದವು. ಚುನಾವಣೆಗೆ ಮೊದಲು ಎನ್ ಡಿಎಗೆ   ಸೇರಿದ್ದವು.ಸರಕಾರ ರಚನೆಗೆ ಪ್ರಯತ್ನ ಮಾಡುವುದರಲ್ಲಿ ಯಾವ ತಪ್ಪು ಇಲ್ಲ ಎಂದು ಆರ್ ಜೆ ಡಿ  ಹೇಳಿಕೊಂಡಿದೆ.

ಆದರೂ  ಯಾವ ಪಕ್ಷಗಳು ಈ ತನಕ ಸಕಾರಾತ್ಮಕ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ನಮ್ಮ ಬಾಗಿಲು ಸದಾ ತೆರೆದಿರುತ್ತದೆ. ಮುಕೇಶ್ ಸಹಾನಿಯವರನ್ನು ಪಕ್ಷ ಉಪಮುಖ್ಯಮಂತ್ರಿಮಾಡಲು ಸಿದ್ಧವಿದ್ದೇವೆ ಎಂದೂ  ಆರ್ ಜೆ ಡಿ  ಹೇಳಿದೆ. 

ಸುದ್ದಿ ಓದಿ