ರಾಣೆಬೆನ್ನೂರ

ಇಂದು ಸರ್ಕಾರಿ ದಿನಗೂಲಿ ನೌಕರರ ಉಪವಾಸ ಸತ್ಯಾಗ್ರಹ

ಇಂದು ಸರ್ಕಾರಿ ದಿನಗೂಲಿ ನೌಕರರ ಉಪವಾಸ ಸತ್ಯಾಗ್ರಹ

ರಾಣೇಬೆನ್ನೂರು: ಸೆ. 13 ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಕರೆಯ ಮೇರೆಗೆ ಹಾವೇರಿ ಜಿಲ್ಲಾ ನೌಕರರು ಒಂದು ದಿವಸದ ಉಪವಾಸ ಸತ್ಯಾಗ್ರಹ ಹಮ್ಮಿಕೂಳ್ಳಲು ಮುಂದಾಗಿದ್ದು ಈ ಕುರಿತು ಪರವಾನಿಗೆ ನೀಡಲು ಹಾವೇರಿ  ತಾಲೂಕಾ ದಂಡಾದಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಕೂಂಗಿ ಅವರು ಮಾಧ್ಯಮಕ್ಕೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಹೂರಗುತ್ತಿಗೆ ನೌಕರರು ದಿನಗೂಲಿ ಮತ್ತು  ಖಾಯಂಗೂಂಡ ನೌಕರರು ತಮ್ಮ ಬಹು ವರ್ಷ್‍ಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹಾಗೂ ಬಾಕಿ ವೇತನ ಬಿಡುಗಡೆಗೂಳಿಸಲು ಒತ್ತಾಯಿಸಿ ಮತ್ತು ಕೂೀವಿಡ್ ಅವಧಿಯ ಮೂರು ತಿಂಗಳ ವೇತನವನ್ನು ಪಾವತಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿದೆ ಸೆ 15 ರಂದು ಬುಧವಾರ ಮುಂಜಾನೆ 10ರಿಂದ ಸಂಜೆ 5ರವರಗೆ ನಡೆಯಲಿದ್ದು ಅಂದು 9ಗಂಟೆಗೆ ಹಾವೇರಿ ಜಿಲ್ಲಾಧಿಕಾರಿಗಳ ಕಛೇರಿ ಗೇಟ್ ಬಳಿ ಎಲ್ಲ ನೌಕರರು ಉಪಸ್ಥಿತರಿದ್ದು ಈ ಕಾರ್ಯಕ್ರಮವು ಯಶಸ್ವಿಗೂಳಿಸುವಂತೆ ಬಸವರಾಜ್ ಕೂಂಗಿ ಮನವಿ ಮಾಡಿದ್ದಾರೆ.

ಸುದ್ದಿ ಓದಿ