ಕಾರ್-ಬೈಕ್ ಢಿಕ್ಕಿ ಸರ್ಕಾರಿ ನೌಕರ ಸಾವು
ರಾಣೀಬೆನ್ನೂರ 14: ರಾಣೀಬೆನ್ನೂರ ತಾಲೂಕು ಎಣ್ಣಿಹೊಸಳ್ಳಿ ಗ್ರಾಮದ ಹತ್ತಿರ ಕಾರು ಹಾಗೂ ಬೈಕ್ ಮಧ್ಯ ಇಂದು ಬೆಳಿಗ್ಗೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.
ಹಿರೇಕೆರೂರು ತಾಲೂಕು ಮಾಸೂರ ಗ್ರಾಮದಿಂದ ಹರಿಹರಕ್ಕೆ ಹೊರಟಿದ್ದ ಆದರ್ಶ ಕರಿಗಾರ(28) ಮೃತ ವ್ಯಕ್ತಿಯಾಗಿದ್ದು ಇವರು ಹರಿಹರದ ಮೀನುಗಾರಿಕೆ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸದರಿ ಪ್ರಕರಣವನ್ನು ಹಲಗೇರಿ ಠಾಣಾ ಪಿಎಸ್ಐರವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆಂದು ವರದಿಯಾಗಿದೆ.