ಬೈಲಹೊಂಗಲ

ನಾಟಕಗಳಲ್ಲಿರುವ ಒಳ್ಳೆತನವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಪಾಟೀಲ

ನಾಟಕಗಳಲ್ಲಿರುವ ಒಳ್ಳೆತನವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಪಾಟೀಲ

ಬೈಲಹೊಂಗಲ 19:  ಇಂದಿನ ಪ್ರಸ್ತುತ ದಿನಗಳಲ್ಲಿ ನಾಟಕಗಳಲ್ಲಿ ಬರುವ ಪಾತ್ರಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ, ನಾಟಕಗಳಲ್ಲಿರುವ ಒಳ್ಳೆತನವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಗ್ರಾಮ ದೇವಿ ಜಾತ್ರಾ ಕಮೀಟಿ ಅಧ್ಯಕ್ಷ ದೀಪಕಗೌಡ ಪಾಟೀಲ ಹೇಳಿದರು. 

ತಾಲೂಕಿನ  ದೇಶನೂರ ಗ್ರಾಮದ ಗ್ರಾಮದೇವಿ, ಭಾಂವಿ ಬಸವೇಶ್ವರ ಹಾಗೂ ಹನುಮಂತ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಶ್ರೀ ಬನಶಂಕರಿದೇವಿ ನಾಟ್ಯ ಸಂಢದಿಂದ ‘ಬಾಳು ಬೆಳಗಿದ ಮನೆ’  ಎಂಬ   ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ನಾಟಕಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯವೆಂದರು. ಯುವಕರು ಇಂದು ಆಧ್ಯಾತ್ಮದ ಕಡೆಗೆ ಹೆಚ್ಚು ಒಲವನ್ನು ತೋರುವುದರ ಜೊತೆಗೆ ಸಂಸ್ಕಾರಯುತವಂತರಾಗಬೇಕೆಂದರು.  

ಈ ಸಂದರ್ಭದಲ್ಲಿ ಕಿತ್ತೂರ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪಾದರ್ ಗೋನ್ವಾಲಿಸ್, ಗ್ರಾಪಂ ಮಾಜಿ ಅಧ್ಯಕ್ಷ ದೀಪಕಗೌಡ ಪಾಟೀಲ, ಪ್ರವೀಣ ಪಾಶ್ಛಾಪೂರ, ಶ್ರೀಶೈಲ ಕಮತಗಿ, ಮಲ್ಲಿಕಾರ್ಜುನ ಕೊತ್ತಲ, ಬಸವರಾಜ ಕೇದಾರಿ, ಗ್ರಾಪಂ ಅಧ್ಯಕ್ಷೆ ಸುರೇಖಾ ಕೇದಾರಿ, ಸದಾನಂದ ಭಜಂತ್ರಿ, ಪ್ರಶಾಂತ ಚಡಿಚ್ಯಾಳ, ಸುರೇಶ ರಂಕಾಳಿ, ಬಸವಂತ ಚಡಿಚ್ಯಾಳ, ಸಂತೋಷ ತಿಳಗಂಜಿ ಇದ್ದರು. 


ಸುದ್ದಿ ಓದಿ