ಐಡಿಎಲ್ ಪ್ರೌಢ ಶಾಲಾ ವಿದ್ಯಾರ್ಥಿಗಳ ಉತ್ತಮ ಸಾಧನೆ



ಸಿಂದಗಿ: 2024ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮೋರಟಗಿ ಗ್ರಾಮದ ಐಡಿಎಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 15 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯುತ್ತಮ ಶ್ರೇಣಿ 2 ಪ್ರಥಮ ಶ್ರೇಣಿ 12 ವಿದ್ಯಾರ್ಥಿಗಳು ಪಾಸಾಗಿದ್ದು ಶಾಲಾ ಫಲಿತಾಂಶ ಶೇ. 93.30ರಷ್ಟಾಗಿದೆ.
ಬಸವರಾಜ ದಂಡಿನ 553-ಶೇ. 88.48, ಮಾಯಿನಕುಬ್ರ ಮುಲ್ಲಾ, 548-ಶೇ. 87.68, ಕಾರ್ತಿಕ್ ಬಳಗುಂಪಿ 530-ಶೇ. 84.80, ಹುಸೇನ್ ಮುಳ್ಳೋಳ್ಳಿ 518- ಶೇ. 82.88, ಅಂಜುಮ ಬಾಗವಾನ 508-ಶೇ. 81.28, ಅಂಕಗಳನ್ನು ಪಡೆದು ಐಡಿಎಲ್ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಉತ್ತಮ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಶಾಲೆಯ ಸಂಸ್ಥಾಪಕ ಅಧ್ಯಕ್ಷರು ಆಡಳಿತ ಮಂಡಳಿ ಶಿಕ್ಷಕ ವೃಂದ ಹಾಗೂ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿ ವಿದ್ಯಾರ್ಥಿಗಳ ಜೀವನ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.