ರಾಣೆಬೆನ್ನೂರ

ಉತ್ತಮ ಸಂಸ್ಕಾರ ಮಕ್ಕಳನ್ನು ಆದರ್ಶರನ್ನಾಗಿ ಮಾಡುತ್ತದೆ

ಉತ್ತಮ ಸಂಸ್ಕಾರ ಮಕ್ಕಳನ್ನು ಆದರ್ಶರನ್ನಾಗಿ ಮಾಡುತ್ತದೆ

ರಾಣಿಬೆನ್ನೂರ 06: ಮಕ್ಕಳು ಸಂಸ್ಕಾರ ಸಂಸ್ಕೃತಿ ಧಾರ್ಮಿಕ ಮನೋಭಾವನೆಯ ಜೊತೆಗೆ ಉತ್ತಮವಾದ ಶಿಕ್ಷಣ ಪಡೆದು, ಸಮಾಜಮುಖಿಯಾದಂತಹ ಗುರಿಯನ್ನು ಹೊಂದಿ ಆಗ ಗುರಿಯನ್ನು ತಲುಪುವವರಿಗೂ ನಿರಂತರ ಪ್ರಾಮಾಣಿಕ ಶ್ರಮವಿದ್ದಾಗ ಮಾತ್ರ ಸಮಾಜದಲ್ಲಿ ಗುರಿಯನ್ನು ಸಾಧಿಸಿ ಆದರ್ಶರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಜೆಸಿಐ ಪೂರ್ವಾಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಹೇಳಿದರು. 

ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರದಂದು ಜೆಸಿಐ ಸಂಸ್ಥೆ ರಾಣೇಬೆನ್ನೂರ ಇವರ ವತಿಯಿಂದ ಏರಿ​‍್ಡಸಿದ್ದ ರಾಷ್ಟ್ರೀಯ ಭಾವೈಕ್ಯತಾ ದಿನ ಹಾಗೂ ಪ್ರಾಮಾಣಿಕ ಮಳಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪ್ರೀತಿ ವಿಶ್ವಾಸ, ಸ್ನೇಹ ಹಾಗೂ ಭಾವೈಕ್ಯತೆಯಿಂದ ಮುನ್ನಡೆದಾಗ ಆದರ್ಶಮಯವಾದ ಪರಿಸರವನ್ನು ಕಾಣಲು ಸಾಧ್ಯ ಎಂದರು. 

ಜಗತ್ತಿನಲ್ಲಿ ಶ್ರೇಷ್ಠವಾದ ಸಂಪತ್ತು ಮಾನವನಲ್ಲಿದೆ. ಅದನ್ನರಿತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಅಂದಾಗ ಮಾನವ ದೇವಮಾನವನಾಗಲು ಸಾಧ್ಯ. ದ್ವೇಷ, ಅಸೂಯೆ, ಜಾತೀಯತೆ ಎಂಬ ವೈಷಮ್ಯದಂತಹ ಕೀಳು ಪ್ರವೃತ್ತಿಯನ್ನು ಅಂಟಿಸಿಕೊಳ್ಳದೆ ಮುನ್ನಡೆದಾಗ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದರು. 

ಜೆಸಿಐ ಅಧ್ಯಕ್ಷ ವೆಂಕಟೇಶ ಕಾಕಿ ಜೆಸಿಐ ಸಂಸ್ಥೆಯ ಕುರಿತು ಮಾತನಾಡಿದರು. ನಿಕಟ ಪೂರ್ವಾಧ್ಯಕ್ಷ ಆರ್‌.ವಿ.ಪಾಟೀಲ, ಕೋಶಾಧ್ಯಕ್ಷ ಪ್ರಕಾಶ ಬನ್ನಿಕೋಡ ಕಾರ್ಯಕ್ರಮ ಕುರಿತು ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಜಿ.ವಿ.ದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿದರು. ಜೆಸಿಐ ಸದಸ್ಯರಾದ ವಿನಯ ಗುಲಗಂಜಿ, ಭೋಜರಾಜ ಗುಲಗಂಜಿ, ಎಸ್‌ಡಿಎಂಸಿ ಸದಸ್ಯ ಮಾಬುಸಾಬ ನದಾಫ, ಶಾಲಾ ಮುಖ್ಯೋಪಾಧ್ಯಾಯರುಗಳಾದ ಐ ಹೆಚ್ ಮೈದೂರ, ವಿಜಯ ಪೂಜಾರ, ಡಾ.ವಿನಾಯಕ, ಶಿಕ್ಷಕ ಎಸ್‌ಎಸ್ ಮುಳಗುಂದ, ಅಂಗನವಾಡಿ ಶಿಕ್ಷಕಿಯರಾದ ವನಜಾಕ್ಷಿ ಪೂಜಾರ, ಮಂಗಳಾ ಉಪ್ಪಿನ ಸೇರಿದಂತೆ ಶಾಲಾ ಸಹ ಶಿಕ್ಷಕಕರು ಮಕ್ಕಳು ಮತ್ತು ಸಿಬ್ಬಂಧಿವರ್ಗದವರು ಇದ್ದರು. 


ಸುದ್ದಿ ಓದಿ