ಚಿಕ್ಕೋಡಿ

ಗೋರಕ್ಷಣೆ ಮಹತ್ವದ್ದು: ದಯಾನಂದ ಜಾಧವ

ಗೋರಕ್ಷಣೆ ಮಹತ್ವದ್ದು: ದಯಾನಂದ ಜಾಧವ

ಚಿಕ್ಕೋಡಿ 06: ಗೋ ತಳಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ  ಭಾರತ ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಗೋರಕ್ಷಣೆ ಮಹತ್ವದ್ದಾಗಿದೆ ಎಂದು ಬೀರೇಶ್ವರ ಅಂತರಾಜ್ಯ ಸಹಕಾರಿ ಸಂಸ್ಥೆಯ ಅಧ್ಯಕ್ಷ ದಯಾನಂದ ಜಾಧವ ಹೇಳಿದರು. 

ಶುಕ್ರವಾರ ತಾಲೂಕಿನ ಯಕ್ಸಂಬಾದ ಜೊಲ್ಲೆ ಶಿಕ್ಷಣ ಸಂಸ್ಥೆಯ ಜ್ಯೋತಿಬಾ ದೇವಸ್ಥಾನದ ಆವರಣದಲ್ಲಿ ದೀಪಾವಳಿ(ಬಲಿಪಾಡ್ಯಮಿ) ದಿನದಂದು “ಗೋ ಪೂಜಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಯಿ ಹಾಲಿನಷ್ಟೇ ಹಸುವಿನ ಹಾಲು ಪ್ರಾಮುಖ್ಯತೆ ಹೊಂದಿದೆ. ತಾಯಿ ಹಾಲು ಇಲ್ಲದಿದ್ದರೂ ಹಸುವಿನ ಹಾಲು ಕುಡಿದು ನಾವು ಬದುಕಿದ್ದೇವೆ ಎಂದರು. 

ಗೋವುಗಳನ್ನು ಹಿಂದೂ ಸಂಸ್ಕೃತಿ ಅವುಗಳನ್ನು ಉಳಿಸಿಬೆಳೆಸುವ ಕಾರ್ಯ ನಮ್ಮಿಂದಾಗಬೇಕು. ಗೋ ಪೂಜೆ ಮಾಡುವ ಕುರಿತು ರಾಜ್ಯ ಸರಕಾರದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರ ಸರ್ಕಾರಿ ಆದೇಶವನ್ನು ಸ್ವಾಗತಿಸುತ್ತೇವೆ ಎಂದರು. 

ಮಹಿಳೆಯರೂ ಗೋವಿನ ಕಾಲಿಗೆ ನೀರು ಹಾಕಿ ಅರಿಶಿನ ಕುಂಕುಮ ಹಚ್ಚಿ ಆರತಿ ಬೆಳಗಿ ಪೂಜೆ ಸಲ್ಲಿಸಿ ಗೋಮಾತೆಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನ್ನಿಸಿ ಗೋಗ್ರಾಸವನ್ನು ನೀಡಿದರಲ್ಲದೇ ಧೂಪ-ದೀಪಗಳಿಂದ ಪೂಜಿಸುವ ಮೂಲಕ ದೀಪಾವಳಿ(ಬಲಿಪಾಡ್ಯಮಿ) ದಿನದಂದು  “ಗೋ ಪೂಜಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಲಕ್ಷ್ಮಣ ಕಬಾಡೆ, ಚಂದ್ರಕಾಂತ ಖೋತ,  ಕಲ್ಲಪ್ಪ ಜಾಧವ,ಲಕ್ಷ್ಮೀಬಾಯಿ ಮೇತ್ರೆ,ಶರಧ ಶಿಂಧೆ,ಸುಭಾಷ ಕಟ್ಟಿಕರ,ಮನೋಹರ ಕುಪ್ಪಾನಟ್ಟಿ,ಶಂಕರ ಬಾಕಳೆ, ಸದಾಶಿವ ಕಬಾಡೆ, ನರಸು ಹಿರೇಕೂಡಿ,ಶಂಕರ ರೇಂದಾಳೆ ಉಪಸ್ಥಿತರಿದ್ದರು. 


ಸುದ್ದಿ ಓದಿ