ನಿಷ್ಟಾವಂತ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಿ: ಶಿವಯೋಗಿ
ಹೊಸಪೇಟೆ 01: ರಾಜ್ಯ ಚುನಾವಣಾ ಆಯೋಗವು ಹೊಸಪೇಟೆ ನಗರಸಭೆಗೆ ಚುನಾವಣೆಯ ದಿನಾಂಕವನ್ನು ನಿಗದಿ ಮಾಡಿ ಘೋಷಣೆ ಮಾಡಿರುವ ಪ್ರಯುಕ್ತ ನಗರದ ಪರ್ವಾಜ್ ಪ್ಲಾಜಾದಲ್ಲಿರುವ ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ವಿ ಶಿವಯೋಗಿರವರ ನೇತೃತ್ವದಲ್ಲಿ ಟಿಕೆಟ್ ಆಕಾಂಕ್ಷಿಗಳು ಮತ್ತು ಮುಖಂಡರ ಸಭೆ ಹಮ್ಮಿಕೊಳ್ಳಲಾಗಿತ್ತು.ಈ ಸಭೆಯನ್ನು ಉದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ ಶಿವಯೋಗಿರವರು ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಾಗಿ ದುಡಿದ ಕಾರ್ಯಕರ್ತರಿಗೆ ಮೊದಲ ಆದ್ಯತೆ ನೀಡಿ ನಮ್ಮ ಪಕ್ಷವು ಟಿಕೆಟ್ ನೀಡಲಿದೆ. ಹಾಗೂ ಪಕ್ಷದ ಚುನಾವಣಾ ವೀಕ್ಷಕರ ಸಮಿತಿಯು ಆಗಮಿಸಿ ಸ್ಥಳೀಯ ಮುಖಂಡರ ಹಾಗೂ ಜನಾಭಿಪ್ರಾಯ ಸಂಗ್ರಹಿಸಿ ಕಾರ್ಯಕರ್ತರಿಗೆ ಪಕ್ಷವು ಟಿಕೆಟ್ ನೀಡಲಾಗುವುದು ಎಂದರು.
ಟಿಕೆಟ್ ಆಕಾಂಕ್ಷಿಗಳು ಪಕ್ಷವು ನೀಡಿದ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅರ್ಜಿಗಳನ್ನು ಇದೇ ವೇಳೆ ವಿತರಿಸಿದರು. ಈ ಸಭೆಯನ್ನು ಉದ್ದೇಶಿಸಿ ಹೊಸಪೇಟೆ ಬ್ಲಾಕ್ ಸಮಿತಿಯ ನಿಕಟಪೂರ್ವ ಅಧ್ಯಕ್ಸರಾದ ಹೆಚ್. ಎನ್. ಮೊಹಮ್ಮದ್ ಇಮಾಮ್ ನಿಯಾಜಿರವರು ಮಾತನಾಡಿ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಪಕ್ಷ ನಿಷ್ಟೆಯಿಂದ ದುಡಿದ ಕಾರ್ಯಕರ್ತರನ್ನು ಗುರುತಿಸಿ ಪಕ್ಷವು ಟಿಕೆಟ್ ನೀಡಬೇಕೆಂದು ಹಿರಿಯರಲ್ಲಿ ಒತ್ತಾಯಿಸಿದರು ಹಾಗು ಪ್ರತಿ ವಾರ್ಡ್ನ ಸ್ಥಳೀಯರಿಗೆ ಆದ್ಯತೆ ನೀಡಬೇಕು ಹಾಗು ಇತರೆ ಪಕ್ಸದಿಂದ ವಲಸೆ ಬಂದವರಿಗೆ ಪಕ್ಷವು ಮನ್ನಣೆ ನೀಡಬಾರದು ಎಂದು ಒತ್ತಾಯಿಸಿದರು.
ಈ ವೇಳೆ ಕೂಡ್ಲಿಗಿ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾದ ರಘು ಗುಜ್ಜಲರವರು ಹಾಗೂ ಮುಖಂಡರಾದ ದೀಪಕ್ ಕುಮಾರ್ ಸಿಂಗ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿ.ಸೋಮಪ್ಪ, ಬಿ.ಮಾರೆಣ್ಣ, ವೆಂಕಟರಮಣ, ಅಬ್ದುಲ್ ಖದೀರ್, ರಾಮನಗೌಡ, ವೆಂಕೋಬಣ್ಣ, ಸತ್ಯನಾರಾಯಣ, ಟಿ.ಚಿದಾನಂದ, ಕೆ.ಮಲ್ಲಪ್ಪ, ಬೆಲ್ಲದ ರೌಫ್, ಬಸವರಾಜ ಮೇಟಿ, ರಫೀಕ್, ಕೃಷ್ಣ, ನೌಷಾದ್, ಕನ್ನೇಶ್ವರ, ಗುಡಿಗಂಟಿ ಮಲ್ಲಿಕಾರ್ಜುನ, ಮಳಿಗಿ ಅಸ್ಲಾಂ, ಕೆ. ಗೌಸ್, ರಘು ಗುಜ್ಜಲ್, ಮುನ್ನಿ ಖಾಸಿಂ, ಶೇಕ್ ತಾಜುದ್ದೀನ್, ಬಾನು ಬೀ, ಅಲನ್ ಭಕ್ಷಿ, ಗೀತಾ ತಿಮ್ಮಪ್ಪ ಯಾದವ್, ಇಂದುಮತಿ, ಯೋಗ ಲಕ್ಷ್ಮೀ, ರಾಜಾ ಸಾಬ್ , ಎಸ್.ಬಿ.ಶ್ರೀನಿವಾಸ, ಜಿ.ರಾಘವೇಂದ್ರ, ರವಿ ಕುಮಾರ್, , ತಿಮ್ಮಪ್ಪ ಯಾದವ್, ವಿಜಯಕುಮಾರ್, ಭರತ್ ಕುಮಾರ್, ಸೈಯದ್ ಬುಡೇನ್ ಅಯೇಶಾ , ಅಲಂ ಭಾಷ, ಹೊಸಪೇಟೆ ನಗರಸಭೆ ಮಾಜಿ ಸಧ್ಯಸರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪಧಾದಿಕಾರಿಗಳು, ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರು ತಾಲೂಕು ಮುಖಂಡರು ಉಪಸ್ಥಿತರಿದ್ದರು