ಸೌಂದತ್ತಿ

ದೇಗುಲದಲ್ಲಿ ಸ್ವಚ್ಛತೆಗೆ ಮಹತ್ವ ನೀಡಿ: ಬಸವರಾಜ ಜೀರಗಾಳ

ದೇಗುಲದಲ್ಲಿ ಸ್ವಚ್ಛತೆಗೆ ಮಹತ್ವ ನೀಡಿ: ಬಸವರಾಜ ಜೀರಗಾಳ
ಯಲ್ಲಮ್ಮನ ಸನ್ನಿಧಿಯಲ್ಲಿ ಸ್ವಚ್ಛತೆ ಕುರಿತು ದೇವಸ್ಥಾನದ ಸಿಬ್ಬಂದಿಗಳಿಂದ ಜಾಗೃತಿ ಜಾಥಾ ನಡೆಸಲಾಯಿತು.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಕುರಿತಂತೆ ತರಬೇತಿ ಕಾರ್ಯಾಗಾರ 

ಸವದತ್ತಿ 14: ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ದೇವಸ್ಥಾನಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಯೋಜನೆ ಅನುಷ್ಟಾನ ಮತ್ತು ಸಮರ್ಥ ನಿರ್ವಹಣೆಗೆ ಕ್ರಮ ಜರುಗಿಸುವ ಕುರಿತಂತೆ ಯಲ್ಲಮ್ಮನ ಸನ್ನಿಧಿಯಲ್ಲಿ 3 ದಿನಗಳ ತರಬೇತಿ ಕಾರ್ಯಾಗಾರ ಜರುಗಿತು.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗಾಳ ಮಾತನಾಡಿ, ನಿತ್ಯ ಪೂಜಿತೆ ಯಲ್ಲಮ್ಮ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಸ್ವಚ್ಛತೆಗೆ ಮಹತ್ವ ನೀಡಿ ದೇಗುಲವನ್ನು ಸ್ವಚ್ಛಂಧವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಂಗಡಿಕಾರರು ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಕಸ ಹಾಕದೇ ನಿಗದಿತ ಕಸದ ತೊಟ್ಟಿಗೆ ಹಾಕಿ ಸಹಕರಿಸಬೇಕು. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಕುರಿತಂತೆ ಆವರಣದಲ್ಲಿ ಅಲ್ಲಲ್ಲಿ ಕಸದತೊಟ್ಟಿ ಇರಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ನಿಷೇದವಾಗಿದ್ದು, ಬಳಸಿದವರಿಗೆ ದಂಡ ವಿಧಿಸಲಾಗುತ್ತಿದೆ. ಭಕ್ತರು ಸೇರಿ ಸರ್ವರೂ ಸಹಕರಿಸಿ ದೇವಸ್ಥಾನದ ವೈಭವಕ್ಕೆ ಧಕ್ಕೆ ತರದಂತೆ ಕಾರ್ಯನಿರ್ವಹಿಸಬೇಕೆಂದರು.

ಕಾರ್ಯಾಗಾರ ದ ಭಾಗವಾಗಿ ಗುರುವಾರ ಉಗರಗೋಳ ಎಸ್.ಆರ್.ಡಿ ಹೈಸ್ಕೂಲನ ವಿದ್ಯಾಥರ್ಿಗಳು, ದೇವಸ್ಥಾನದ ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರಿಂದ ದೇವಸ್ಥಾನದ ಆವರಣ, ಎಣ್ಣೆ ಹೊಂಡ, ದಾಸೋಹ ಕೇಂದ್ರ, ಬಸ್ ನಿಲ್ದಾಣ ಸೇರಿ ಹೆಚ್ಚು ಜನ ಸೇರುವ ಪ್ರಮುಖ ಸ್ಥಳಗಳಲ್ಲಿ ಜಾಥಾ ಮೂಲಕ ಭಕ್ತರು, ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು. 

ಈ ವೇಳೆ ತಾ.ಪಂ ಇಒ ಯಶವಂತಕುಮಾರ, ವೈ.ವೈ. ಕಾಳಪ್ಪನವರ, ಅರವಿಂದ ಮಾಳಗಿ, ನಾಗರತ್ನ ಚೋಳಿನ್ ಹಾಗೂ ಅರ್ಚಕ ಸಿಬ್ಬಂದಿಗಳಿದ್ದರು.

 

 

ಸುದ್ದಿ ಓದಿ