ಕುಡಿಯಲು ಶುದ್ಧ ನೀರು ಕೊಡಿ ಸ್ವಾಮಿ: ನಗರಕ್ಕೆ ಬಂದ ಜನರಿಗೆ ನೀರಿನ ದಾಹ ತೀರಿಸುವವರು ಯಾರು.?
ಎ ಕೆ. ಮಲ್ಲಿಕಾರ್ಜುನ್,
ಬಳ್ಳಾರಿ 11 : ಗಣಿನಾಡು ನಗರದ ಪ್ರಮುಖ ಸ್ಥಳಗಳಲ್ಲಿ ಕುಡಿಯಲು ಶುದ್ಧ ನೀರು ಸಿಗದೇ ಜನರು ಪರದಾಡುತ್ತಿದ್ದಾರೆ, ದುಡ್ಡು ಕೊಟ್ಟು ನೀರು ಖರೀದಿಸಿ ಕುಡಿಯುವುದು ಅನಿವಾರ್ಯವಾಗಿದೆ.ಪ್ರತಿನಿತ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶ. ಇತರಡೆಗಳಿಂದ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಡಿಸಿ ಕಚೇರಿ ಆವರಣ, ನಗರ ಸಾರಿಗೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯಗಳಿಲ್ಲ. ದುಡ್ಡು ಕೊಟ್ಟು ನೀರು ಖರೀದಿಸಲಾಗದ ಸಾರ್ವಜನಿಕರು ದಾಹ ತೀರಿಸಿಕೊಳ್ಳಲು ಹೋಟೆಲ್ ಟೀ ಸ್ಟಾಲ್ ಗಳ ಮೊರೆ ಹೋಗುತ್ತಿದ್ದಾರೆ.ನಗರದ ಹಲವು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿದ್ದು. ಅವುಗಳನ್ನು ಸರಿಪಡಿಸುವ ಗೋಜಿಗೆ ಜಿಲ್ಲಾಡಳಿತ ಮಹಾನಗರ ಪಾಲಿಕೆ ಮುಂದಾಗಿಲ್ಲ.ಜಿಲ್ಲಾಡಳಿತ ಕಚೇರಿಯಲ್ಲಿಯೇ ಶುದ್ಧ ಕುಡಿಯುವ ನೀರು ಸಿಗುವುದಿಲ್ಲ. ಈ ಬಗ್ಗೆ ಗಮನಹರಿಸಬೇಕಿದ್ದ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ."ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ."ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಸ್ಪಂದನ ಕೇಂದ್ರದ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ ಹಾಕಿ ಹಲವು ವರ್ಷಗಳು ಕಳೆದಿವೆ.ಕಚೇರಿಯ ಸಿಬ್ಬಂದಿಗಳಿಗೆ ಖಾಸಗಿ ಘಟಕಗಳ ಕ್ಯಾನ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ಕಚೇರಿಯ ಕೆಲಸಕ್ಕೆ ಬಂದ ಸಾರ್ವಜನಿಕರು ಹೋಟೆಲ್ ಟೀ ಅಂಗಡಿಗಳನ್ನು ಹುಡುಕಿಕೊಂಡು ಹೋಗಬೇಕಿದೆ.ನೆಚ್ಚಿನ ಜನಸಂದಾಣಿಸಿರುವ ಬಸ್ ನಿಲ್ದಾಣ, ಡಿಸಿ ಕಚೇರಿ, ರೈಲ್ವೆ ನಿಲ್ದಾಣ ಸೇರಿದಂತೆ ಇತರೆ ಸ್ಥಳಗಳಲ್ಲಿ ಉಚಿತ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ.ಕೋಟ್.01"ಟೀ ಕಾಫಿ ಕುಡಿದರೆ ಮಾತ್ರ ನೀರು.."ಹೋಟೆಲ್ ಗಳಲ್ಲಿ ಟೀ ಕಾಫಿ ಕುಡಿದರೆ ಮಾತ್ರ ನೀರು ಕೊಡುತ್ತಾರೆ, ಇಲ್ಲದಿದ್ರೆ ಹೋಟೆಲ್ ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಗ್ರಾಮೀಣ ಭಾಗದಿಂದ ಬರುವ ಜನರಿಗೆ ಕನಿಷ್ಠ ಸೌಲಭ್ಯ ಕಲ್ಪಿಸುವುದು ಜನಪ್ರತಿನಿಧಿ ಮತ್ತು ಅಧಿಕಾರಿಗಳ ಜವಾಬ್ದಾರಿ, ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು.ಬಸವನಗೌಡ. (ಎಮ್ಮಿಗನೂರು)ಕೋಟ್. 02ತೆರಿಗೆ ಕಟ್ಟುವ ಜನರಿಗೆ ಉಚಿತ ನೀರು ಕೊಡಲು ಸಾಧ್ಯವಿಲ್ಲವೇ.? ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಜನರ ಸ್ಥಿತಿ ಹೇಳತೀರದಾಗಿರುತ್ತದೆ. ಬಿಸಿಲು ನಾಡು ಎಂದೇ ಖ್ಯಾತಿ ಹೊಂದಿರುವ ಬಳ್ಳಾರಿ ನಗರದಲ್ಲಿ ಅತಿ ಹೆಚ್ಚು ಬಿಸಿಲಿನ ತಾಪಮಾನವಿದ್ದು ನೀರಿಗಾಗಿ ಅಲೆದಾಡುವಂತೆ ಆಗಿದೆ.
ಸೂಕ್ತ ಸ್ಥಳಗಳನ್ನು ಗುರುತಿಸಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು.ಹುಊ. ಪ್ರಭು. ಜಿಲ್ಲಾಧ್ಯಕ್ಷರು "ಅಖಿಲ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ವೇದಿಕೆ"ಕೋಟ್:03ಕೋಟಿಗಟ್ಟಲೆ ವಾಯುವಾಟು ನಡೆಯುವ ಗಣಿ ಜಿಲ್ಲೆ..ಇಡೀ ಬಳ್ಳಾರಿ ನಗರ ಸುತ್ತಾಡಿದರು ಉಚಿತ ಶುದ್ಧ ಕುಡಿಯುವ ನೀರಿನ ಘಟಕಗಳ ಸೌಲಭ್ಯವಿಲ್ಲ. ದಿನಕ್ಕೆ ಸಾವಿರಾರು ಕೋಟಿ ರೂಪಾಯಿ ವಾಯುವಾಟು ನಡೆಯುವ ಪ್ರಮುಖ ನಗರದಲ್ಲಿ ಹಾಗೂ ಪ್ರತಿನಿತ್ಯ ಜನಸಂದಣಿ ಇರುವ ಬಸ್ ನಿಲ್ದಾಣ ರೈಲ್ವೆ ನಿಲ್ದಾಣ ಡಿಸಿ ಕಚೇರಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಇಲ್ಲ.ಎಚ್. ಎಂ ಶ್ರೀನಿವಾಸ್ ಕರ್ಚೆಜಡು