ಹೊಸಪೇಟೆ

ಯುವತಿ ಕಾಣೆ ಪ್ರಕರಣ ದಾಖಲು

ಯುವತಿ ಕಾಣೆ ಪ್ರಕರಣ ದಾಖಲು

ಹೊಸಪೇಟೆ(ವಿಜಯನಗರ)06: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿವೇಣಿ ಎಂಬ 17ವರ್ಷದ  ಯುವತಿಯು ಜೂ.29ರಂದು ಬೆಣ್ಣೆಕಲ್ಲು ಗ್ರಾಮದಿಂದ ಕಾಣೆಯಾಗಿರುವುದರ ಕುರಿತು ಪ್ರಕರಣ ದಾಖಲಾಗಿದೆ ಎಂದು ಹಗರಿಬೊಮ್ಮನಹಳ್ಳಿಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಯುವತಿಯ ಚಹರೆ ಗುರುತು: ದುಂಡನೇಯ ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, 5.1ಅಡಿ ಎತ್ತರ, ಹಣೆಯ ಮೇಲೆ ಹಚ್ಚೆ ಗುರುತು ಇದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. 

ಕಿತ್ತಳೆ ಬಣ್ಣದ ಚೂಡಿದಾರ ಮತ್ತು ಚ್ಯಾಕಲೇಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. 

ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಹಗರಿಬೊಮ್ಮನಹಳ್ಳಿ ಠಾಣೆಯ ಪಿ.ಎಸ್‌.ಐ. ಅವರ ದೂ.ಸಂ: 08397-238333, ಹಗರಿಬೊಮ್ಮನಹಳ್ಳಿ ವೃತ್ತ ಸಿ.ಪಿ.ಐ. ಅವರ ದೂ.ಸಂ: 08397-238333, ಕೂಡ್ಲಿಗಿ ಡಿ.ಎಸ್‌.ಪಿ. ಅವರ ದೂ.ಸಂ: 08391-220326, ವಿಜಯನಗರ ಎಸ್‌.ಪಿ. ಅವರ ದೂ.ಸಂ: 08394-224933ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. 


ಸುದ್ದಿ ಓದಿ