ಬಳ್ಳಾರಿ

ಯುವತಿ ಕಾಣೆ

ಯುವತಿ ಕಾಣೆ

ಬಳ್ಳಾರಿ,ಜೂ.06: ಸಿರುಗುಪ್ಪ ಪಟ್ಟಣ 23ನೇ ವಾರ್ಡ್‌ನ ಅಗಸರ ಓಣಿಯ ನಿವಾಸಿ ಮಂಜುಳ(19) ಎಂಬ ಯುವತಿಯು ಮೇ 31 ರಂದು ಕಾಣೆಯಾಗಿರುವ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಯುವತಿಯು ಎತ್ತರ 4 ಅಡಿ, ದುಂಡಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿರುತ್ತಾಳೆ. ಕಾಣೆಯಾದ ಸಂದರ್ಭದಲ್ಲಿ ಪರ್ಪಲ್ ಕಲರ್ ಟಾಪ್, ಗ್ರೇ ಬಣ್ಣದ ಲಗ್ಗಿನ್ಸ್‌ ಧರಿಸಿರುತ್ತಾಳೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.  

ಕಾಣೆಯಾದ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿ.ಎಸ್‌.ಐ ದೂ.08396-220333, ಸಿ.ಪಿ.ಐ ದೂ.08396-220003 ಹಾಗೂ ಬಳ್ಳಾರಿ ಗ್ರಾಮೀಣ ಉಪ ವಿಭಾಗ ಡಿ.ಎಸ್‌.ಪಿ ಅವರ ದೂ.08392-276000 ಮತ್ತು ಬಳ್ಳಾರಿ ಎಸ್‌.ಪಿ ಅವರ ದೂ.08932-258400 ಗೆ ಸಂಪರ್ಕಿಸಬಹುದು. 


ಸುದ್ದಿ ಓದಿ