ಬಾಲಕಿ ಕಾಣೆ: ನದಿಯಲ್ಲಿ ಹುಡುಕಾಟ
ಜಮಖಂಡಿ 28: ತಾಲೂಕಿನ ಕಡಕೋಳ ಗ್ರಾಮದಲ್ಲಿ ಕೃಷ್ಣಾ ನದಿ ತುಂಬಿ ಹರಿಯುವ ಹಿನ್ನೆಲೆಯಲ್ಲಿ ಬಾಲಕಿಯೊಬ್ಬಳು ನೀರಿನ ರಭಸಕ್ಕೆ ಕಾಣಿಯಾಗಿದ್ದಾಳೆಂದು ಶಂಕಿಸಲಾಗಿದೆ.
ಸಮೃದಿ (ಬಂದವ್ವ) ಸಿದ್ದಪ್ಪ ತಿಮ್ಮಪ್ಪನ್ನವರ (4) ಬಾಲಕಿ ಆಟವಾಡುತ್ತಾ ನದಿಯ ತೀರಕ್ಕೆ ಹೋಗಿರುವದು ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಶೆರೆಯಾಗಿದ್ದು. ಮನೆಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನದಿ ತೀರಕ್ಕೆ ಬಂದು ನೋಡಿದಾಗ. ಬಾಲಕಿಯ ಚಪ್ಪಲಿಗಳು ದಡದಲ್ಲಿ ದೊರೆಕಿದ ಹಿನ್ನೆಲೆ ಸಮೃದಿ ನದಿಯ ನೀರಿನಲ್ಲಿ ಕಾಣಿಯಾಗಿದ್ದಾಳೆಂದು ತಿಳಿದುಬರುತ್ತದೆ.
ಮನೆಯ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟುವಂತೆ ಇತ್ತು. ಘಟನಾ ಸ್ಥಳಕ್ಕೆ ತಹಶೀಲ್ದಾರ ಸದಾಶಿವ ಮಕ್ಕೋಜಿ, ಸಿಪಿಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ದಳದವರು. ಮೀನುಗಾರ ಹಾಗೂ ಗ್ರಾಮಸ್ಥರ ಸಹಾಯದಿಂದ ಕೃಷ್ಣಾ ನದಿಯಲ್ಲಿ ಬಾಲಕಿಯ ಪತ್ತೆಗಾಗಿ ಕಾರ್ಯಚರಣೆ ನಡೆಸಿದ್ದಾರೆ.