ಮೈದುಂಬಿ ಹರಿಯುತ್ತಿರುವ ಘಟಪ್ರಭೆ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಲೋಕದರ್ಶನ ವರದಿ
ಬೆಳಗಾವಿ 03: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿತುವ ಮಳೆಯಿಂದಾ ಜಿಲ್ಲೆಯ ಪಂಚನದಿಗಳು ಮೈದುಂಬಿ ಹರಿಯುತ್ತಿದ್ದು, ಕೃಷ್ಣಾ ನದಿಗೆ ಜಾಗೂ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿರುವದರಿಂದ ಘಟಪ್ರಭಾ ನದಿಯು ಮೈದುಂಬಿ ಹರಿಯುತ್ತಿದೆ. ಇದರಿಂದ ಹಿಡಕಲ್ ಜಲಾಶಯದಲ್ಲಿ ನೀರಿನ ಸಂಗ್ರಹವು ಹೆಚ್ವುತ್ತಿದ್ದು, ಜಲಾಶಯವು ಭರ್ತಿ ಹಂತಕ್ಕೆ ತಲುಪಿದ್ದು, ಜಲಾಶಯವು ಭರ್ತಿಗೆ ಇನ್ನು ಕೆಲವೆ ಅಡಿ ಬಾಕಿ ಇದೆ.
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಇನ್ನೇರಡು ದಿನ ಹೀಗೆ ಸತತವಾಗಿ ಮಳೆ ಸುರಿದರೆ ಹಿಡಕಲ್ ಜಲಾಶಯವು ಭರ್ತಿಯಾಗಲಿದೆ. ಅಲ್ಲದೆ ಸದ್ಯ ಹಿಡಕಲ್ ಡ್ಯಾಂ ಭರ್ತಿ ಆಗುತ್ತಿರುವದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ದೂರಾಗಲಿದೆ ಎಂದು ಊಹಿಸಲಾಗುತ್ತಿದೆ.