ಸಂಘಟನೆಯ ಮೂಲಕ ಸರ್ಕಾರದ ಸಹಾಯ ಪಡೆಯಬೇಕು: ಅರುಣಕುಮಾರ ಪೂಜಾರ
ಲೋಕದರ್ಶನ ವರದಿ
ರಾಣೇಬೆನ್ನೂರ 14: ಬೆಳೆಯುತ್ತಿರುವ ಜನಸಂಖ್ಯೆಗನುಗುಣವಾಗಿ ಇಂದು ಕುಶಲಕರ್ಮಿಗಳು ಸಮಾಜದಲ್ಲಿ ಸಂಘಟನೆಯಾಗಬೇಕಾದ ಅಗತ್ಯವಿದೆ. ಸರ್ಕಾರ ಎಲ್ಲ ರೀತಿಯಲ್ಲಯು ಸಹಾಯ ಸಹಕಾರ ಕೂಡುವುದರ ಜೊತೆಗೆ ಪ್ರೋತ್ಸಾಹ ನೀಡುವುದರ ಮೂಲಕ ಅವರ ಆರ್ಥಿಕ ಸಮಾನತೆಗೆ ನಿರಂತರ ಶ್ರಮಿಸುತ್ತಲಿದೆ ಪ್ರಯೋಜನವನ್ನು ಪಡೆಯಲು ಕಾರ್ಮಿಕರು ಮುಂದಾಗಬೇಕು. ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು
ಅವರು ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದಲ್ಲಿ ನಡೆದ ರಾಣೇಬೆನ್ನೂರು ತಾಲೂಕಾ ವಿಶ್ವಕರ್ಮ ಮನೆಗೆಲಸ (ಕಾರ್ೆಂಟರ್) ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೂಂಡು ಮಾತನಾಡಿದರು. ಇತಿಹಾಸದಲ್ಲಿ ಕುಶಲಕರ್ಮಿಗಳು ಎಲ್ಲ ಸಮುದಾಯದ ಜೊತೆಗೆ ತಮ್ಮ ಸೇವೆಯ ಮೂಲಕ ಭಾವೃಕ್ಯತೆ ಮೇರೆದಿದ್ದಾರೆ. ಕುಶಲಕರ್ಮಿಗಳು ಅಸಂಘಟಿತರಾಗಿ ಮುಂದುವರೆಯುವುದು ಬೇಡ ಇಂದಿನ ಸಮಾಜದಲ್ಲಿ ಸಂಘಟಿತರಾದಾಗ ಮಾತ್ರ ಸಮಾಜ ಮತ್ತು ಸರ್ಕಾರಗಳು ತಮ್ಮ ಸೇವೆಗೆ ಸಹಾಯ ಸಹಕಾರ ನೀಡಲು ಮುಂದಾಗುತ್ತಿವೆ ಎಂದ ಶಾಸಕರು ನೂತನ ಸಂಘದ ಮೂಲಕ ತಮಗಿರುವ ಯಾವುದೇ ಸಮಸ್ಯಗಳನ್ನು ಪರಿಹರಿಸಿಕೂಳ್ಳಲು ಮುಂದಾಗಬೇಕು ಎಂದರು.
ಪಿಕೆಕೆ ಇನಿಷಿಯೇಟಿವ್ ಅಧ್ಯಕ್ಷ ಪ್ರಕಾಶ ಕೋಳಿವಾಡ ಅವರು ಜೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ನೂತನ ಸಂಘಕ್ಕೆ ಶುಭ ಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು ನೂತನ ಸಂಘದ ಅಧ್ಯಕ್ಷ ನಾಗೇಂದ್ರಾಚಾರ್ ಚಿ. ಅರ್ಕಾಚಾರ ಅವರು ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ನಗರಯೋಜನಾ ಪ್ರಾಧಿಕಾರದ ಅದ್ಯಕ್ಷ ಚೋಳಪ್ಪ ಕಸವಾಳ, ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಡಾಽಽ ಬಸವರಾಜ ಕೇಲಗಾರ, ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಪ ಡೂಂಬರ ಮತ್ತೂರ, ಕಾರ್ಮಿಕ ನೀರೀಕ್ಷಕ ಪಿ. ಬಾಲಾಜಿ, ಯುವ ಮುಖಂಡ ಮಂಜುನಾಥ ಗೌಡಶಿವಣ್ಣನವರ, ಡಾಽಽ ವಾಸುದೇವ ಮೂರ್ತಿ, ರವಿ ಮುಂಡಾಸದ, ಮತ್ತಿತರರು ಮಾತನಾಡಿದರು. ಇದೆ ಸಂಧರ್ಭದಲ್ಲಿ ಸಮಾಜದ ಗಣ್ಯರಿಗೆ ಜನಪ್ರತಿನಿಧಿಗಳಿಗೆ ಸೇವಾ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘಟನೆಯ ಮುಖಂಡರಾದ ಹನುಮಂತಾಚಾರ್ ಅರ್ಕಾಚಾರ್, ಮಾಲತೇಶ ಕಮ್ಮಾರ, ಕೃಷ್ಣಪ್ಪ ಅರ್ಕಾಚಾರ್, ಕಾರ್ಯದರ್ಶಿಗಳಾದ ವಿಶ್ವನಾಥ ಕಮ್ಮಾರ, ರಾಘವೇಂದ್ರ ಮಾಯಾಚಾರಿ, ಪ್ರಭು ಬಡಿಗೇರ, ಖಜಾಂಚಿ ದತ್ತಾತ್ರೇಯ ಬಡಿಗೇರ ಇತರರು ಉಪಸ್ಥಿತರಿದ್ದರು. ಶ್ರೀ ವಿಶ್ವರೂಪ ಲಲಿತಕಲಾ ನಿಕೇತನದ ವಿಧ್ಯಾರ್ಥಿಗಳು ಪ್ರಾರ್ಥಿಸಿದರು, ಮಾರ್ತಾಂಡಪ್ಪ ನಿ. ಕಮ್ಮಾರ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮತನಾಡಿದರು. ಮಾಲತೇಶ ಬಡಿಗೇರ ನಿರೂಪಿಸಿ, ಮಲ್ಲಪ್ಪ ಕಮ್ಮಾರ ವಂದಿಸಿದರು.