ಉತ್ತಮ ಅಂಕ ಪಡೆದು, ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ : ಜೋಶಿ
ಲೋಕದರ್ಶನ ವರದಿ
ಶಿಗ್ಗಾವಿ : ಈ ವಿದ್ಯಾ ಸಂಸ್ಥೆ 75 ವಸಂತ ಪೂರೈಸಿದೆ ಹಾಗಾಗಿ ಅನೇಕ ಹಿರಿಯರು ನಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೇ ಆಗಿದ್ದಾರೆ. ನೀವೆಲ್ಲಾ ಈಗ ಅವರ ಮಕ್ಕಳು ಆಗಿದ್ದೀರಿ ಎಲ್ಲ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ಮೇಲೆ ವಿಶ್ವಾಸ ಇಟ್ಟು ಅಡ್ಮಿಶನ್ ಮಾಡಿಸಿದ್ದೀರಿ. ಎಂದು ಶಿಗ್ಗಾವಿ ತಾಲೂಕ ಶಿಕ್ಷಣ ಸಮಿತಿ ಗೌರವ ಕಾರ್ಯದರ್ಶಿಗಳು ಎಸ್ ಪಿ ಜೋಶಿ ಹೇಳಿದರು.
ಪಠ್ಯ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಭಾರತೀಯ ಸೇವಾದಳ ಘಟಕ ಉದ್ಘಾಟನೆ, ರೋವರ್ ಮತ್ತು ರೇಂಜರ್ ಘಟಕಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂಸ್ಥೆಯಲ್ಲಿ ಉತ್ತಮ ಉಪನ್ಯಾಸಕರು, ಸಿಬ್ಬಂದಿಯವರು ಇದ್ದಾರೆ. ಅವರ ಪಾಠ ಪ್ರವಚನಗಳನ್ನು ಕೇಳಿಕೊಂಡು ಉತ್ತಮ ಅಂಕ ಪಡೆಯಿರಿ ಮತ್ತು ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿರಿ, ಜ್ಞಾನವಂತರಾಗಿರಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆವಹಿಸಿ ಸಂಸ್ಥೆಯ ಉಪಾಧ್ಯಕ್ಷ ದತ್ತಣ್ಣ ವರ್ಣಾಕರ್ ಮಾತನಾಡಿ ಜ್ಞಾನಕ್ಕಿಂತ ಮಿಗಿಲಾದದು ಯಾವುದು ಇಲ್ಲ. ಪಿಯುಸಿಯ ವಯಸ್ಸು ಚಂಚಲಮಯವಾದ ವಯಸ್ಸು. ಈ ಹಂತವನ್ನು ಯಶಸ್ವಿಯಾಗಿ ದಾಟಿದರೆ ನೀವು ಮುಂದೆ ಉತ್ತಮ ಯಶಸ್ಸನ್ನು ಪಡೆಯಲು ಸಾಧ್ಯ. ಎಲ್ಲರೂ ಗುರುಗಳ ಪಾಠ ಪ್ರವಚವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ತದೇಕಚಿತ್ತದಿಂದ ಓದಿ ವಿದ್ಯಾವಂತರಾಗಿರಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಪ್ರಾಚಾರ್ಯ ರಮಾಕಾಂತ್ ಭಟ್, ಕನ್ನಡ ಉಪನ್ಯಾಸಕ ಡಾ. ಎಸ್ ಬಿ ಹರ್ಲಾಪುರ್, ಉಪ ಪ್ರಾಚಾರ್ಯ ಕೆ ಬಿ ಚನ್ನಪ್ಪ ಮಾತನಾಡಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಎಸ್ ಪಿ ಬಳ್ಳಾರಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ಭಾರತಿ ಚಿಪ್ಪಿನ ಕಾರ್ಯಕ್ರಮ ನಿರೂಪಿಸಿದರು, ಸೌಮ್ಯ ಪಾಟೀಲ್ ಸ್ವಾಗತಿಸಿದರು, ನಿರ್ಚಿತ ಈಟಿ ವಂದಿಸಿದರು