ಚಿಕ್ಕೋಡಿ

ಕೊರೋನಾ ನಿರ್ನಾಮಕ್ಕೆ ಪ್ರತಿಯೊಬ್ಬರು ಲಸಿಕೆ ಪಡೆಯಿರಿ: ಶ್ರೀಗಳು

ಕೊರೋನಾ ನಿರ್ನಾಮಕ್ಕೆ ಪ್ರತಿಯೊಬ್ಬರು ಲಸಿಕೆ ಪಡೆಯಿರಿ: ಶ್ರೀಗಳು
ಕೊರೊನಾ ಎರಡನೆ ವ್ಯಾಕ್ಸಿನ್ ಪಡೆದ ಚಿಂಚಣಿ ಹಾಗೂ ಚಿಕ್ಕೋಡಿ ಸ್ವಾಮೀಜಿಗಳೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು.

ಚಿಕ್ಕೋಡಿ 29: ಕೊರೊನಾ ಮುಕ್ತ ದೇಶವನ್ನಾಗಿ ಮಾಡುವ ಉದ್ದೇಶದಿಂದ ಪ್ರತಿಯೊಬ್ಬರು ಲಸಿಕೆ ಪಡೆದು ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು. 

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕ್ಕೋಡಿ ಚರಮೂರ್ತಿಮಠದ ಸಂಪಾದ ಸ್ವಾಮೀಜಿ ಹಾಗೂ ಚಿಂಚಣಿ ಸ್ವಾಮೀಜಿ ಎರಡನೆ ಲಸಿಕೆ ಪಡೆದ ಬಳಿಕ ಅವರು ಮಾತನಾಡಿದರು. ಕೊರೊನಾ ನಿಯಂತ್ರಿಸಲು ಆರೋಗ್ಯ ಇಲಾಖೆ ಸಾಕಷ್ಟು ಪರಿಶ್ರಮ ಪಡುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ  45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಬೇಕು ಎಂದರು. 

ಬರುವ ಮೇ 1 ರಿಂದ 18 ವರ್ಷ ದಿಂದ 45 ವರ್ಷದ ವಯಸ್ಸಿನವರಿಗೂ ಲಸಿಕೆ ನೀಡಲಾಗುತ್ತಿದೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೊರೊನಾದ ಎರಡನೆ ಅಲೆ ಹೆಚ್ಚಾಗಿ ಯುವಕರಿಗೆ ಅಂಟಿಕೊಳ್ಳುತ್ತಿದೆ. ಆದ್ದರಿಂದ ಯುವಕರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದರು. 

ಈ ಸಂದರ್ಭದಲ್ಲಿ ಚಿಕ್ಕೋಡಿ ಚರಮೂರ್ತಿಮಠದ ಸಂಪಾದನ ಸ್ವಾಮೀಜಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ