ಗ್ಯಾಸ್ ದರ ಮತ್ತಷ್ಟು ಬಿಸಿ: ಗ್ರಾಹಕರಿಗೆ ಮತ್ತೊಂದು ಬರೆ
ಸಿರುಗುಪ್ಪ 21: ಇತ್ತೀಚೆಗೆ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರವನ್ನು 50ರೂ ಹೆಚ್ಚಿಸಿದ್ದ ಕೇಂದ್ರ ಸಕರ್ಾರ ಮತ್ತೆ 3.50 ರೂ.ಹೆಚ್ಚಿಸಿದೆ ಇದರಿಂದಾಗಿ ದೇಶದ ಎಲ್ಲಾ ನಗರಗಳಲ್ಲಿ 14ಕೆ.ಜಿ ಎಲ್ಪಿಜಿ ಬೆಲೆ ಸಾವಿರ ರೂ.ಗಳ ಗಡಿ ದಾಟಿದಂತಾಗಿದೆ ಜೊತೆಗೆ ವಾಣಿಜ್ಯ ಸಿಲಿಂಡರ್ ದರವನ್ನು 8ರೂ ಏರಿಸಲಾಗಿದೆ ಪರಿಷ್ಕೃತ ದರ ಗುರುವಾರದಿಂದಲೇ ಜಾರಿಗೆ ಬಂದಿದೆ ಈ ಏರಿಕೆಯಿಂದಾಗಿ ಮೇ ತಿಂಗಳಲ್ಲಿ ಎಲ್ ಪಿಜಿ ದರ 2ಬಾರಿ ಹೆಚ್ಚು ಆದಂತಾಗಿದೆ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಹಾಗೂ ಇತರ ಅತ್ಯಗತ್ಯ ವಸ್ತುಗಳ ದರ ಏರಿಕೆಯಿಂದ ತತ್ತರಿಸಿರುವ ಜನರು ಇದೀಗ ಮತ್ತೊಂದು ಆಥರ್ಿಕ ಆಘಾತ ಎದುರಿಸುವಂತಾಗಿದೆ ಎಂದು ಜನಾಭಿಪ್ರಾಯ ಮುಖಂಡರು ಸಾಕ್ಷರತಾ ಸದಸ್ಯರು ಸಾಮಾಜಿಕ ಕಾರ್ಯಕರ್ತರಾದ ಎ ಅಬ್ದುಲ್ ನಬಿ ಅವರು ತಿಳಿಸಿದರು