ಸಾಮಾಜಿಕ, ಆಧ್ಯಾತ್ಮಿಕ ಧಾರ್ಮಿಕ ಕ್ಷೇತ್ರದಲ್ಲಿ ಗಂಜೀಗಟ್ಟಿ ಶ್ರೀಗಳ ಸೇವೆ ಅಪಾರ: ರೇವಣಸಿದ್ದೇಶ್ವರ ಶಿವಾಚಾರ್ಯ ಶ್ರೀ
ಶಿಗ್ಗಾವಿ 11 : ಗಂಜೀಗಟ್ಟಿ ಶ್ರೀಗಳು ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಅಪಾರ ಸೇವೆಯನ್ನು ಮಾಡಿದ್ದು ಕ್ಷೇತ್ರದ ಜನತೆಗೆ ಸದಾ ಒಳಿತನ್ನ ಬಯಸುವ ಸಹೃದಯಿ, ವಿದ್ಯಾದಾನ, ಅನ್ನದಾನ ಹೀಗೆ ಹಲವಾರು ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ ಅವರಿಗೆ ಲಭಿಸಿರುವ ಈ ಗೌರವ ಡಾಕ್ಟರೇಟ್ ಮಠಕ್ಕೆ ಕಳಶಪ್ರಾಯ ಎಂದು ಬಂಕಾಪೂರ ಅರಳೆಲೆ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ತಾಲೂಕಿನ ಗಂಜೀಗಟ್ಟಿ ಮಠದಲ್ಲಿ ಡಾ. ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಸನ್ಮಾನಿಸಿ ಮಾತನಾಡಿದ ಅವರು ಶ್ರೀಗಳ ಮತ್ತು ನಮ್ಮ ಒಡನಾಟ ಬಹಳ ವರ್ಷಗಳಿಂದಿದ್ದು ಎರಡು ದೇಹ, ಒಂದೇ ಆತ್ಮ ಎಂಬುವ ಹಾಗೆ ನಮ್ಮ ಅವರ ಆತ್ಮೀಯ ಸಂಭಂದವಿದೆ ಎಂದರು.
ಗಂಜೀಗಟ್ಟಿ ಮಠದ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಶ್ರೀಮಠದ ನಾಲ್ಕನೇ ಪೀಠಾಧಿಪತಿ, ನನಗೆ ಮೊದಲು ಗಂಜಿಗಟ್ಟಿ ಕ್ಷೇತ್ರಕ್ಕೆ ಬರುವಾಗ ಮೊದಲಿನ ಶ್ರೀಗಳು ಗಟ್ಟಿತನದಿಂದ ಇದ್ದರೆ ಇಲ್ಲಿ ಗಟ್ಟಿಯಾಗಿ ನೆಲೆಯುತ್ತಿ ಎಂದು ತಿಳಿಸಿದ್ದರು, ಅದೇ ರೀತಿ ಗಂಜಿಗಟ್ಟಿ ಕ್ಷೇತ್ರದ ಭಕ್ತಾದಿಗಳೆಲ್ಲರೂ ನನ್ನನ್ನು ಇನ್ನು ಗಟ್ಟಿಯನ್ನಾಗಿ ಮಾಡಿ ಈ ಕ್ಷೇತ್ರದಲ್ಲಿ ಇರಲು ಬದ್ಧರಾಗಿ ಮಾಡಿದ್ದೀರಿ, ಗೌರವ ಡಾಕ್ಟರೇಟ್ ಪ್ರಶಸ್ತಿಯು ಒಂದು ಪಾಸಾದ ಹಂತದಲ್ಲಿ ನೀಡುವಂತಹ ಸರ್ಟಿಫಿಕೇಟ್ ಆಗಿದ್ದು, ನಿಮ್ಮ ಭಕ್ತಿ ಗೌರವ ವಿನಯದ ಮುಂದೆ ಎನೂ ಅಲ್ಲ ಎಂದರು. ಪ್ರತಿವರ್ಷವೂ ಮಠದಲ್ಲಿ ತಿಂಗಳಿಗೊಮ್ಮೆ ಸತ್ಸಂಗ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಬರೆದಿದ್ದನ್ನು ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯೂನಿವರ್ಸಿಟಿ ಗಮನಿಸಿ ಈ ಪದವಿಯನ್ನು ನಮಗೆ ನೀಡಿ ಗೌರವಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡಲದ ಗುರುನಂಜೇಶ್ವರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಭಕ್ತಾದಿಗಳಿಂದ ಶ್ರೀಗಳನ್ನ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಕ್ತರು, ಗ್ರಾಮ ಪಂಚಾಯತಿ ಸದಸ್ಯರು. ಚರಮೂರ್ತೇಶ್ವರ ಮಹಿಳಾ ಸಂಘದ ಸದಸ್ಯರು, ಶಿಗ್ಗಾವಿ, ಗಂಜಿಗಟ್ಟಿ, ಮಾದಾಪುರ, ಲಕ್ಷ್ಮೇಶ್ವರ, ಹಿರೇಬೆಂಡಿಗೇರಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಉಪಸ್ಥಿತರಿದ್ದರು.