ರಾಣೆಬೆನ್ನೂರ

ಗಂಗಾಜಲ ಚೌಡೇಶ್ವರಿ ದೇವಸ್ಥಾನ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

ಗಂಗಾಜಲ ಚೌಡೇಶ್ವರಿ ದೇವಸ್ಥಾನ ಸ್ವಚ್ಛತಾ ಕಾರ್ಯಕ್ಕೆ ಚಾಲನೆ

ರಾಣೇಬೆನ್ನೂರು 13 : ದೇವಾಲಯಗಳು ಮಾನವನ ವಿಕಾಸತೆ ಮತ್ತು ಮನಸ್ಸಿಗೆ ಶಾಂತಿ ನೆಮ್ಮದಿ ನೀಡುವ ಧರ್ಮಕ್ಷೇತ್ರಗಳಾಗಿವೆ ಎಂದು ನಗರಸಭಾ ಸದಸ್ಯ ಪ್ರಭಾವತಿ ತಿಳುವಳ್ಳಿ ಹೇಳಿದರು. ಅವರು ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯ ಯೋಜನೆಯಲ್ಲಿ  ಇತಿಹಾಸ ಪ್ರಸಿದ್ಧ ನಗರ ದೇವತೆ, ಶ್ರೀ ಗಂಗಾಜಲ ಚೌಡೇಶ್ವರಿ ದೇವಸ್ಥಾನ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.         

 ಮಾನವ ಇಂದಿನ ಆಧುನಿಕ ಬದುಕಿನಲ್ಲಿ ಎಷ್ಟೇ ಮುಂದುವರೆದಿದ್ದರೂ ಸಹ, ಪ್ರತಿಯೊಬ್ಬರೂ  ದೇವರು, ಧರ್ಮ, ಆಧ್ಯಾತ್ಮ, ಪೂಜೆ ಪುನಸ್ಕಾರ ಮಾಡುವುದರ ಮೂಲಕ ಶಾಂತಿ ನೆಮ್ಮದಿ ಪಡೆಯಬೇಕಾಗುತ್ತದೆ  ನೆಮ್ಮದಿ ಮತ್ತು ಮನಸ್ಸಿಗೆ ಶಾಂತಿ ನೀಡುವ ತಾಣಗಳು ಬಹು ಶುದ್ಧತೆಯಿಂದ ಕೂಡಿದಾಗ ಮಾತ್ರ ಸಂತೋಷ ಮತ್ತು ತೃಪ್ತಿ ಕಾಣಲು ಸಾಧ್ಯವಾಗುವುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ, ವಿನಾಯಕ ನಗರದ ಯೋಜನೆಯ ಮೇಲ್ವಿಚಾರಕ ಜಗದೀಶ್ ಅವರು, ಪ್ರಸ್ತುತ 77ನೇ ಭಾರತ ಸ್ವಾತಂತ್ರ್ಯೋತ್ಸವದ ನಿಮಿತ್ತ ಈ ಸ್ವಚ್ಛತಾ ಕಾರ್ಯವು ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ  ಯೋಜನೆಯಲ್ಲಿ ಅಳವಡಿಸಲಾಗಿದೆ. ಆಯಾ ಪ್ರದೇಶದಲ್ಲಿರುವ ದೇಗುಲಗಳಲ್ಲಿ   ಸ್ವಚ್ಛತಾ ಕಾರ್ಯಕ್ರಮವು ಮಾಡಲಾಗುತ್ತಿದೆ. ದೇಗುಲಗಳ ಸ್ವಚ್ಛತೆಯಿಂದ ಆತ್ಮ ಸಂತೋಷದ ಜೊತೆಗೆ, ಸೇವಾ ಕಾರ್ಯಗಳು ಮಾಡಿದ ತೃಪ್ತಿ,ಸಂತೋಷ ಸ್ವಸಹಾಯ ಸಂಘಗಳ ಎಲ್ಲಾ ಮಹಿಳಾ  ಸದಸ್ಯರಿಗೆ ದೊರೆಯಲಿದೆ ಎಂದರು. ಮುಂಜಾನೆಯಿಂದ  ಆರಂಭವಾದ ಈ ಸ್ವಚ್ಛತಾ ಕಾರ್ಯದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ತಮ್ಮ ಸೇವೆ ಸಲ್ಲಿಸಿ, ಸಂಭ್ರಮಿಸಿದರು.      ಈ ಸಂದರ್ಭದಲ್ಲಿ ಎಸ್ ಕೆ ಡಿ ಆರ್ ಡಿ ಪಿ ಯೋಜನೆಯ ಸಿಬ್ಬಂದಿ, ದೇವಸ್ಥಾನದ ಸಮಿತಿ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು

ಸುದ್ದಿ ಓದಿ