ಗಂಗಾಧರ ಸ್ವಾಮೀಜಿ ವಿರಕ್ತಮಠ ಸಂಯುಕ್ತ ಪಪೂ ಕಾಲೇಜ್ ಫಲಿತಾಂಶ ಶೇ.68.21
ಬೈಲಹೊಂಗಲ 14: ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ, ಗಂಗಾಧರ ಸ್ವಾಮೀಜಿ ವಿರಕ್ತಮಠ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಫಲಿತಾಂಶ ಶೇ.68.21 ರಷ್ಟಾಗಿದೆ.
ಕಲಾ ವಿಭಾಗ : ಬಿ.ಎಲ್.ಸೋಮನಟ್ಟಿ ಶೇ.94.83 (ಪ್ರಥಮ), ಎಸ್.ಎ.ಖನಗಾಂವಿ ಶೇ.94.50 (ದ್ವಿತೀಯ), ಎ.ಎಂ.ತಡಕೋಡ ಶೇ.93.50 (ತೃತೀಯ) ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗ : ಎಂ.ಆರ್.ರಡರಟ್ಟಿ ಶೇ.96.67 (ಪ್ರಥಮ), ಪಿ.ಎಸ್.ಬಸಿಡೋಣಿ ಶೇ.90 (ದ್ವಿತೀಯ),
ಟಿ.ಡಿ.ಬಡಿಗೇರ ಶೇ.89.83 (ತೃತೀಯ) ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ, ಮಠದ ಪೀಠಾಧಿಪತಿ ಪ್ರಭುನೀಲಕಂಠ ಮಹಾಸ್ವಾಮಿಗಳು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಎನ್.ಎಸ್.ಚಿಲಮೂರ ಹಾಗೂ ಸರ್ವ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.