ಮುಸ್ಲಿಂ ದೇಶದ ಕರೆನ್ಸಿ ನೋಟಿನ ಮೇಲೆ ಗಣೇಶ ಚಿತ್ರ.. ಏಕೆ ಮುದ್ರಿಸಿದರು ಗೊತ್ತೆ..?
ಜಕಾರ್ತ, ಆಗಸ್ಟ್ 23: ಪ್ರಪಂಚದಲ್ಲಿ ಅತ್ಯಧಿಕ ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶ ಇಂಡೋನೇಷ್ಯಾ. ನಂತರ ಎರಡನೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶ ಭಾರತ ಎಂಬುದು ವಿಶೇಷ. ಇಂಡೋನೇಷ್ಯಾದಲ್ಲಿ ಭಾರತೀಯರು ಅಧಿಕ ಪ್ರಮಾಣದಲ್ಲಿದ್ದಾರೆ. ಅಲ್ಲಿ ವಿಗ್ರಹಾರಾಧನೆ ನಡೆಯುತ್ತದೆ. ಅಲ್ಲಿಯ ಜನರು ಗಣಪತಿಯನ್ನು ಹೆಚ್ಚಾಗಿ ಪೂಜಿಸುತ್ತಾರೆ. ವಿಶೇಷವಾಗಿ ಇಂಡೋನೇಷ್ಯಾದಲ್ಲಿ. ಭಾರತೀಯರು ಹೆಚ್ಚು ಗಣಪತಿಯನ್ನು ಪೂಜಿಸುತ್ತಾರೆ. ಗಣಪತಿ ಬುದ್ಧಿಯ ಸಂಕೇತ.
ಜಗತ್ತಿನ ಯಾವುದೇ ದೇಶದ ಕರೆನ್ಸಿ ನೋಡಿದರೂ, ಅಲ್ಲಿನ ರಾಷ್ಟ್ರೀಯ ನಾಯಕರ ಚಿತ್ರಗಳು, ಇಲ್ಲವೆಂದರೆ, ಆ ದೇಶಗಳಲ್ಲಿನ ಮಹತ್ವದ ಸಂಕೇತಗಳ ಚಿತ್ರಗಳನ್ನು ಹೊಂದಿರುತ್ತವೆ. ನಮ್ಮ ದೇಶದ ಕರೆನ್ಸಿ ನೋಟು ನೋಡಿದರೆ ಮಹಾತ್ಮ ಗಾಂಧಿ ಚಿತ್ರವಿದೆ. ಆದರೆ ನೋಟುಗಳ ಮೇಲೆ ನಮ್ಮ ದೇವರುಗಳ ಚಿತ್ರವನ್ನು ಮುದ್ರಿಸುವುದಿಲ್ಲ. ಆದರೆ, ಇಂಡೋನೇಷ್ಯಾದಲ್ಲಿ ೨೦,೦೦೦ ರೂಪಾಯಿ ನೋಟಿನ ಮೇಲೆ ಗಣಪತಿ ಚಿತ್ರ ಇರುವುದು ವಿಶೇಷ. ವಿನಾಯಕನ ಚಿತ್ರವನ್ನು ಮುದ್ರಿಸುವುದರ ಹಿಂದೆ ಒಂದು ಕಾರಣವಿದೆ. ಒಂದು ಕಾಲದಲ್ಲಿ ಇಂಡೋನೇಷ್ಯಾ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ ಬುದ್ಧಿಜೀವಿಗಳು ಸಮಸ್ಯೆಯಿಂದ ಹೊರ ಬರುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸು ಸಭೆಯಲ್ಲಿ ಗಣೇಶನ ಚಿತ್ರವನ್ನು ಕರೆನ್ಸಿ ನೋಟ್ನಲ್ಲಿ ಮುದ್ರಿಸುವ ಕುರಿತು ಚರ್ಚೆಗೆ ಬಂತು. ಗಣೇಶನ ಚಿತ್ರವನ್ನು ಕರೆನ್ಸಿ ನೋಟ್ನಲ್ಲಿ ಮುದ್ರಿಸಿದ ನಂತರ ಇಂಡೋನೇಷ್ಯಾ ಕ್ರಮೇಣ ಆರ್ಥಿಕ ತೊಂದರೆಗಳಿಂದ ಮುಕ್ತಗೊಂಡಿದಂತೆ