ಮುಂದಗೋಡ

ಹಚ್ಚ ಹಸಿರಿನ ಮಧ್ಯೆ ಕಂಗೊಳಿಸುವ ಗಣೇಶ

ಹಚ್ಚ ಹಸಿರಿನ ಮಧ್ಯೆ ಕಂಗೊಳಿಸುವ ಗಣೇಶ

ಲೋಕದರ್ಶನ ವರದಿ 

ಮುಂಡಗೋಡ:ತಾಲೂಕಿನ ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಧರ್ಮಾ ಕಾಲನಿ ಗ್ರಾಮದ ಬಂಜಾರಾ ತಾಂಡಾದ ಸೇವಾಲಾಲ ಭವನದಲ್ಲಿ ದ್ವಿತೀಯ ವರ್ಷದ ಗಣೇಶೋತ್ಸವದ ಅಂಗವಾಗಿ ಶ್ರೀಸೇವಾಲಾಲ ಗಜಾನನ ಯುವಕ ಮಂಡಳದವರು ವಿಶಿಷ್ಟ ರೀತಿಯಲ್ಲಿ ಗಣೇಶನ ಮೂರ್ತಿ ಅಲಂಕಾರ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.    

ಮೊಳಕೆಯೊಡೆದ ಭತ್ತದ ಹಚ್ಚ ಹಸಿರಿನ ಸಸಿಗಳ ನಡುವೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಹಿಂಭಾಗದಲ್ಲಿ ಭತ್ತದ ಸಸಿಗಳ ಮಧ್ಯೆ ಹರಿಯುವ ನೀರಿನ ಝರಿಯ ಕಂಗೊಳಿಸುವ ನೋಟ ನೋಡುಗರ ಕಣ್ಮನ ಸೆಳೆಯುತ್ತಿದೆ. ಸಮಿತಿಯ ಪ್ರಮುಖರಾದ ಸುರೇಶ ಲಂಬಾಣಿ, ಆನಂದ ಲಂಬಾಣಿ, ಸುರೇಶ ಸುಭಾಸ ಲಂಬಾಣಿ, ಪ್ರಕಾಶ ಲಂಬಾಣಿ, ಕಿರಣ ಲಂಬಾಣಿ, ಗಂಗಾಧರ ಲಮಾಣಿ, ರೇವಂತ ಲಮಾಣಿ ಗಣೇಶನ ಮೂರ್ತಿ ಅಲಂಕಾರ ಕಾರ್ಯ ಮಾಡಿದ್ದಾರೆ. 


ಸುದ್ದಿ ಓದಿ