ಗಣೇಶ ಉತ್ಸವ ದೇಶದ ಒಗ್ಗಟ್ಟಿಗೆ ನಾಂದಿ ಹಾಡಲಿದೆ: ಕವಟಗಿಮಠ
ಚಿಕ್ಕೋಡಿ 16: ಧಾರ್ಮಿಕದ ಜೊತೆಗೆ ಸಾಮಾಜಿಕ ಸೇವೆಗೆ ಯುವಕರು ಮುಂದಾಗಬೇಕು. ಗಣೇಶ ಉತ್ಸವ ದೇಶದ ಒಗ್ಗಟ್ಟಿಗೆ ನಾಂದಿ ಹಾಡಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಇಲ್ಲಿನ ನವಯುಗ ಗಜಾನನ ಮಂಡಳ ಪ್ರಭುವಾಡಿ ಚಿಕ್ಕೋಡಿ 55 ನೆಯ ವಾರ್ಷಿಕೋತ್ಸವದ ನಿಮಿತ್ಯ ರಸಮಂಜರಿ ಕಾರ್ಯಕ್ರಮ ಮತ್ತು ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ದೇಶದ ಸಾತಂತ್ರ್ಯ ಪಡೆಯಲು ಬಾಲಗಂಗಾಧರ ತಿಲಕರು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ದೇಶದ ಜನರ ಒಗ್ಗಟ್ಟಿಗೆ ಭದ್ರಬೂನಾದಿ ಹಾಕಿಕೊಟ್ಟಿದ್ದಾರೆ.ಅಲ್ಲಿಂದ ಇಲ್ಲಿಯವರಿಗೆ ಗಣೇಶ ಉತ್ಸವ ಅದ್ದೂರಿಯಾಗಿ ನಡೆದುಕೊಂಡು ಬಂದಿದೆ ಎಂದರು.
ಗಣೇಶ ಮಂಡಳದ ಯುವಕರು ಗಣೇಶ ಹಬ್ಬದಲ್ಲಿ ಪಟಾಕಿ ಸಿಡಿಸಿ ಡಾಲ್ಬಿ ಹಚ್ಚಿ ಡ್ಯಾನ್ಸ್ ಮಾಡುವ ಬದಲು ಹಬ್ಬದ ಸಂದರ್ಭದಲ್ಲಿ ಆರೋಗ್ಯ ಶಿಬಿರ ಆಯೋಜನೆ ಮಾಡುವ ಮೂಲಕ ಸಾಮಾಜಿಕವಾಗಿ ಕೆಲಸ ಮಾಡಬೇಕು ಎಂದರು.
ಸಾನಿಧ್ಯವನ್ನು ಸಂಪಾದನ್ ಸ್ವಾಮೀಜಿ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ. ಮಂಡಳದ ಅಧ್ಯಕ್ಷ ರಾಜು ಸಂಕೇಶ್ವರಿ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಇರ್ಫಾನ ಬೇಪಾರಿ, ಜಗದೀಶ ಕವಟಗಿಮಠ, ಸಂಜಯ ಕವಟಗಿಮಠ, ಆಧಿನಾಥ ಶೆಟ್ಟಿ, ಅನಿಲ ಮಾನೆ, ವರ್ಧಮಾನ ಸದಲಗೆ, ಆನಂದ ಆರ್ವಾರೆ, ರಣಜೀತ ಶಿಂಧೆ, ಮಂಡಳದ ಉಪಾಧ್ಯಕ್ಷ ನಾಗೇಶ ನಾಯಿಕ, ಅನಿಲ ಮೋರೆ, ಬಿ.ಆರ್.ಯಾಧವ, ಜ್ಯೋತಿಬಾ ಕಾಮಕರ, ಶಿವು ಠಾಣೇಕರ, ಪ್ರವೀಣ ಮಾನೆ, ಮಹಾದೇವ ಬೋಸಲೆ, ಸಿದ್ದೇಶ್ವರ ಪಾಟೀಲ, ಸಂತೋಷ ಟವಳೆ, ಪ್ರವೀಣ ನಿಕ್ಕಂ, ನಿವೃತ್ತಿ ಮಾನೆ, ಶಿವಾನಂದ ಮಠದ, ವೈಭವ ಮಾನೆ, ನೀತೀನ ಮಾನೆ, ಸೂರಜ್ ಪವಾರ, ರೂಪಾ ಯಾದವ, ಲತಾ ಕಾಮಕರ, ರಂಜನಾ ಕದಂ ಮುಂತಾದವರು ಪಾಲ್ಗೊಂಡಿದ್ದರು.
ಖ್ಯಾತ ಯುವ ಗಾಯಕಿ ಮಹನ್ಯ ಪಾಟೀಲ, ಅರ್ಜುನ ಇಟಗಿ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.