ಸತ್ಯಾಗ್ರಹ ಶಾಂತಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಗಾಂಧೀಜಿ : ಮುನಿಯಪ್ಪ
ರಾಣಿಬೆನ್ನೂರ 4: ಸತ್ಯಾಗ್ರಹ ಹಾಗೂ ಶಾಂತಿ ಮೂಲಕ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಗಾಂಧೀಜಿ ಎಂದು ಪ್ರಾಚಾರ್ಯ ಪಿ.ಮುನಿಯಪ್ಪ ಹೇಳಿದರು.
ಬುಧವಾರ ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪಪೂ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಂಡ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯಲ್ಲಿ ಅವರ ಭಾವಾ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ನೆಡೆದ ಹೋರಾಟಗಳಲ್ಲಿ ಹಲವಾರು ಮಹಾನೀಯರು ತಮ್ಮ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದರು.
ಜಿಲ್ಲಾ ನೋಡಲ್ ಅಧಿಕಾರಿ ಹೆಚ್.ಶಿವಾನಂದ, ಶಿಕ್ಷಕ ರವಿ ಕೆ.ಎಸ್, ಉಪನ್ಯಾಸಕ ಕರಬಸಪ್ಪ ಗುಗ್ಗರಿ, ಶಿವಮೂರ್ತಯ್ಯ.ಹೆಚ್.ಎಂ, ಚಂದ್ರಶೇಖರ.ಹೆಚ್.ಎಂ, ಪ್ರಕಾಶ.ಸಿ, ಅಶೋಕ.ಎಲ್, ಕವಿತಾ ಪುಟ್ಟನಗೌಡ್ರ, ಆರ್.ಪ್ರವೀಣ್‌ಕುಮಾರ್, ಎಸ್.ಎಂ.ಮಕಂದರ್, ಜಗದೀಶ ಕೊರವರ ಮತ್ತಿತರರು ಇದ್ದರು.