ಗಾಂಧೀಜಿ ಜನ್ಮವಷರ್ಾಚರಣೆ ಸ್ಥಬ್ಧಚಿತ್ರ ರಥಯಾತ್ರೆಗೆ ಅದ್ದೂರಿಸ್ವಾಗತ

ಗಾಂಧೀಜಿ ಜನ್ಮವಷರ್ಾಚರಣೆ ಸ್ಥಬ್ಧಚಿತ್ರ ರಥಯಾತ್ರೆಗೆ ಅದ್ದೂರಿಸ್ವಾಗತ

ಬಳ್ಳಾರಿ 14: ಮಹತ್ಮಗಾಂಧಿಜೀ ಅವರ 150ನೇ ಜನ್ಮವಷರ್ಾಚರಣೆ ನಿಮಿತ್ತ ಅವರ ಸಂದೇಶಗಳನ್ನು ಇಡಿ ರಾಜ್ಯಧ್ಯಾಂತ ಪಸರಿಸುವ ನಿಟ್ಟಿನಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯೂ ಏರ್ಪಡಿಸಿರುವ ಗಾಂಧಿ ಅಭಿಯಾನದ ಸ್ತಬ್ದಚಿತ್ರ ರಥಯಾತ್ರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣಕ್ಕೆ ಶುಕ್ರವಾರ ಪ್ರವೇಶಿಸಿತು. ಗಾಂಧಿ ಅಭಿಯಾನದ ಸ್ತಬ್ದ ಚಿತ್ರ ರಥಯಾತ್ರೆ ಕೂಡ್ಲಿಗಿ ಪಟ್ಟಣಕ್ಕೆ ಪ್ರವೇಶಿಸುತ್ತಲ್ಲೇ ಆದ್ದೂರಿಯಾದ ಸ್ವಾಗತ ದೊರೆಯಿತು. ಅಧಿಕಾರಿಗಳು, ಶಾಲಾ ಕಾಲೇಜಿನ ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರು ಅತ್ಯಂತ ಅದ್ದೂರಿಯಾದ ಸ್ವಾಗತವನ್ನು ಕೋರಿದರು. ಮಹತ್ಮಗಾಂಧಿಜೀ ಅವರಿಗೆ ಪ್ರಿಯವಾದ ರಘುಪತಿ ರಾಘವ ರಾಜರಾಂ, ವೈಶ್ನವಿ ಜನತೋ ಸೇರಿದಂತೆ ವಿವಿದ ಭಜನೆಗಳನ್ನು ಹಾಡಿದರು. ಗಾಂಧಿಜೀಪರ ಘೋಷಣೆಗಳನ್ನು ಕೂಗಿ ಸಂಭ್ರಮವ್ಯೆಕ್ತ ಪಡಿಸಿದರು. 

ತಹಸಿಲ್ದಾರ್ ಎಲ್.ಕೃಷ್ಣ ಮೂತರ್ಿ ಅವರು ಕೂಡ್ಲಿಗೆ ಪಟ್ಟಣದ ಗಾಂಧಿಜೀ ಚಿತಾಬಸ್ಮದ ಹುತಾತ್ಮರ ಸ್ಮಾರಕದ ಬಳಿ ವಿಶೇಷ ಪೂಜೆ ಸಲ್ಲಿಸಿ ಮಹತ್ಮರ ಪ್ರತಿಮೆಗೆ ಹೂಮಾಲೆ ಹಾಕುವ ಮೂಲಕ ನಮಿಸಿದರು. ಈ ಸಂದರ್ಭದಲ್ಲಿ ಗಾಂಧಿಜೀ ಪರ ಜಯ ಘೋಷಣೆಗಳನ್ನು ಕೂಗುವ ಮೂಲಕ ವಿದ್ಯಾಥರ್ಿಗಳನ್ನು ಹುರಿದುಂಬಿಸಿದರು. ಸ್ತಬ್ದಚಿತ್ರ ಎದರುಗಡೆ ಮಹತ್ಮಗಾಂಧಿಜೀ ಅವರ ವಿಶ್ರಾಂತ ಭಂಗಿಯಲ್ಲಿ ಕುಳಿತಿರುವ ಪ್ರತಿಮೆ, ಗಾಂಧಿಜೀ ಅವರ ದುಂಡಿ ಸತ್ಯಾಗ್ರಹ ನಡೆಸಿರುವುದು ಮತ್ತು ಅವರೊಂದಿಗೆ ಸ್ವತಂತ್ರಹೋರಾಟಗಾರರು ಹೆಜ್ಜೆ ಹಾಕುತ್ತಿರುವುದು, ಗಾಂಧಿಜೀ ಅವರ ಬಾಲ್ಯಜೀವನದಿಂದ ಹಿಡಿದು ಅವರು ಸ್ವತಂತ್ರಹೋರಾಟಗಾರರಾಗಿ ರೂಪಿತವಾಗಿರುವವರಿಗಿನ ರೇಖಾಚಿತ್ರಗಳು ಹಾಗೂ ವೈವಿದ್ಯಮಯ ಚಿತ್ರಗಳು ಸ್ತಬ್ದಚಿತ್ರ ರಥಯಾತ್ರೆಗಳಲ್ಲಿವೆ. ಇದರ ಜೊತೆಗೆ ರಥಯಾತ್ರೆಯಲ್ಲಿ ಅಳವಡಿಸಲಾಗಿರುವ ಎಲ್.ಇ.ಡಿ ಬೆಳಕಿನಲ್ಲಿ ಮಹತ್ಮರ ಸಂದೇಶಗಳು ಬಿತ್ತಾರವಾಗುತ್ತಿರುವುದನ್ನು ತಹಸಿಲ್ದಾರರು ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ವಿಕ್ಷಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ತಹಸಿಲ್ದಾರ್ ಕೃಷ್ಣಮೂತರ್ಿ ರಾಷ್ಟ್ರಪಿತ ಮಹತ್ಮಗಾಂಧಿಜೀ ಅವರ 150ನೇ ಜನ್ಮವಷರ್ಾಚರಣೆ ಹೊತ್ತಿನಲ್ಲಿ ಅವರ ವಿಚಾರಧಾರೆಗಳು ಮತ್ತು ಸಂದೇಶಗಳನ್ನು ಇಡಿ ನಾಡಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎರಡು ಮಾರ್ಗದಲ್ಲಿ ಈ ರಥಯಾತ್ರೆಗಳು ರಾಜ್ಯಾಧ್ಯಂತ ಸಂಚರಿಸುತ್ತಿವೆ. ಶಾಂತಿಮಾರ್ಗ ಎನ್ನುವ ಸ್ತಬ್ದಚಿತ್ರ ರಥಯಾತ್ರೆಯೂ ಬಳ್ಳಾರಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಂಚರಿಸಿ ಕೂಡ್ಲಿಗೆಗೆ ಶುಕ್ರವಾರ ಆಗಮಿಸಿರುವುದು ಸಂತೋಷವಾಗಿದೆ ಎಂದರು. ಶಾಲಾ ಕಾಲೇಜು ವಿದ್ಯಾಥರ್ಿಗಳು ಗಾಂಧಿಜೀ ಅವರ ವಿಚಾರ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕೆಂದು ಸಲಹೆ ನೀಡಿರುವ ಅವರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ರಥಯಾತ್ರೆಯನ್ನು ವಿಕ್ಷಿಸಿಸಬೇಕು ಎಂದರು. ಈ ಸಂದರ್ಭದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿಧರ್ೇಶಕ ಬಿ.ಕೆ.ರಾಮಲಿಂಗಪ್ಪ ಅವರು ಈ ಸ್ತಬ್ದಚಿತ್ರ ರಥಯಾತ್ರೆಯ ದೆಯೊದ್ದೇಶಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಪ್ರೋಬೆಷನರಿ ತಹಸಿಲ್ದಾರ ಮಂಜುನಾಥ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಆರ್.ನಾಗರಾಜಪ್ಪ, ಪ್ರೌಢಶಾಲೆಯ ಮುಖ್ಯಗುರುಗಳಾದ ಜಿ.ಮಾರೆಪ್ಪ, ಉಪನ್ಯಾಸಕರುಗಳಾದ ಜಗದೀಶ್ ಚಂದ್ರಬೊಸ್, ಶ್ರೀನಿವಾಸ ಗೌಡ್ರ, ಬಸವರಾಜ ಸೇರಿದಂತೆ ಇನ್ನೂ ಹಲವಾರು ಅಧಿಕಾರಿ ವರ್ಗದವರು ಭಾಗವಹಿಸಿದ್ದರು.


ಸುದ್ದಿ ಓದಿ