ಶಿಗ್ಗಾವ್

ಕಾಂಗ್ರೇಸ ಮುಖಂಡರಿಂದ ಗಾಂಧಿ ನಡಿಗೆ ಪಾದಯಾತ್ರೆ

ಕಾಂಗ್ರೇಸ ಮುಖಂಡರಿಂದ ಗಾಂಧಿ ನಡಿಗೆ ಪಾದಯಾತ್ರೆ

ಶಿಗ್ಗಾವಿ 03:  ಗಾಂಧಿ ಜಯಂತಿ ಮತ್ತು ಗಾಂಧೀಜಿ ಅವರ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿದ ಪ್ರಯುಕ್ತ ಪಟ್ಟಣದಲ್ಲಿ ಶಿಗ್ಗಾವಿ ಮತ್ತು ಸವಣೂರು ಬ್ಲಾಕ್ ಕಾಂಗ್ರೆಸ್ ಸಮಿತಿವತಿಯಿಂದ  ವಿಧಾನ ಸಭಾ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ  ನೇತೃತ್ವದಲ್ಲಿ ಒಂದು ಕಿಲೋಮೀಟರ್ ಗಾಂಧಿ ನಡಿಗೆ ಪಾದಯಾತ್ರೆಯನ್ನು ಚೆನ್ನಮ್ಮ ವೃತ್ತದಿಂದ ಗುಜರಾತ ಭವನದವರೆಗೆ ಹಮ್ಮಿಕೊಳ್ಳಲಾಯಿತು. 

ಈ ಸಂದರ್ಭದಲ್ಲಿ ಯುವ ನಾಯಕ ಯಾಸಿರ ಅಹ್ಮದಖಾನ್ ಪಠಾಣ,  ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಸಿ.ಎಂ.ಪೈಜ್, ಬ್ಲಾಕ್ ಅಧ್ಯಕ್ಷರಾದ ಬಿ.ಸಿ.ಪಾಟೀಲ, ಎಂ.ಜೆ.ಮುಲ್ಲಾ,  ಮಂಜುನಾಥ ಮಣ್ಣಣ್ಣವರ, ನೂರಹ್ಮದಮಳಗಿ,ಅಬ್ದುಲ್‌ಕರೀಂ ಮೊಗಲಲ್ಲಿ, ಗುಡ್ಡಪ್ಪ ಜಲದಿ, ಎಸ್‌.ಎಫ್‌.ಮಣಕಟ್ಟಿ, ಶಂಬು ಆಜೂರ, ಶ್ರೀಕಾಂತ ಪೂಜಾರ, ಸುಧೀರ ಲಮಾಣಿ, ಮಹಾಂತೇಶ ಸಾಲಿ, ಮಲ್ಲಮ್ಮ ಸೋಮನಕಟ್ಟಿ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ