ಡಿ.26ರಂದು ‘ಗಾನ ಗಮನ’ ಸಂಗೀತ ಕಾರ್ಯಕ್ರಮ
ರಾಣೇಬೆನ್ನೂರ 23: ವಾಣಿಜ್ಯ ನಗರದ ಕರ್ನಾಟಕ ಸಂಘದಲ್ಲಿ ಡಿ.26 ರಂದು ರವಿವಾರ ಸಂಜೆ 6 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ರೀ ಮಾರ್ತಾಂಡ ನೃತ್ಯ ಸಂಗೀತ ಕಲಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಆಕಾಶವಾಣಿ ಕಲಾವಿದೆ ಕು. ರಜನಿ ಎಲ್. ಕರಿಗಾರ ತಂಡದವರಿಂದ ‘ಗಾನ ಗಮನ’ ಹಿಂದೂಸ್ತಾನಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಾರ್ತಾಂಡ ನೃತ್ಯ ಮತ್ತು ಸಂಗೀತ ಕಲಾ ಸಂಸ್ಥೆಯ ಅಧ್ಯಕ್ಷ ಗುಡ್ಡು ನಾಡಿಗೇರ ಅಧ್ಯಕ್ಷತೆ ವಹಿಸುವರು. ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸುವರು. ಹಿಂದೂಸ್ತಾನಿ ಗಾಯಕ ಹುಬ್ಬಳ್ಳಿಯ ಪಂ. ಬಾಲಚಂದ್ರ ನಾಕೋಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ನಗರಸಭಾ ಸದಸ್ಯೆ ಗಂಗಮ್ಮ ಈಶ್ವರ ಹಾವನೂರ, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ವರ್ತಕ ಜಿ.ಜಿ.ಹೊಟ್ಟಿಗೌಡ್ರ ಅತಿಥಿಗಳಾಗಿದ್ದಾರೆ.