ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಿ
ಬೈಲಹೊಂಗಲ06: ನರಗುಂದ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಯನ್ನು ಗಲ್ಲು ಶಿಕ್ಷಕೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ನಗರ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು. ವಿಶ್ವ ಹಿಂದೂ ಪರಿಷತ್ ತಾಲೂಕು ಗೌರವ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ, ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಮಾತನಾಡಿದರು. ಅಪ್ರಾಪ್ತ ಬಾಲಕಿಯನ್ನು ಲವ್ ಜಿಹಾದ್ ಉದ್ದೇಶಕ್ಕೆ ಅಪಹರಿಸಿಕೊಂಡು ಅವರ ಮೇಲೆ ಅತ್ಯಾಚಾರ ಎಸಗಲಾಗಿದೆ.
ಇದನ್ನು ವಿಶ್ವ ಹಿಂದೂ ಪರಿಷತ್, ಭಜರಂಗದಳ ಖಂಡಿಸಿದೆ. ಕೂಡಲೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿ ಮೇಲೆ ಕ್ರಮ ಕೈಕೊಂಡು ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಬಜರಂಗದಳ ಸಹ ಸಂಯೋಜಕ ಮಂಜುನಾಥ ಜಾಧವ, ಅಶೋಕ ಸವದತ್ತಿ, ರಾಜು ಬಡಿಗೇರ, ಅಜ್ಜಪ್ಪ ಕುಡಸೋಮಣ್ಣವರ, ಮಹಾನಿಂಗ ಬಂಡಿವಡ್ಡರ, ಕುಮಾರ ಹೂಗಾರ, ಮಹಾಂತೇಶ ಮಾತನವರ, ಸಂಜು ಮುದ್ದಪ್ಪನವರ ಇದ್ದರು. ಎಸಿ ಶಶಿಧರ ಬಗಲಿ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರಕ್ಕೆ ಮನವಿ ಕಳುಹಿಸಿಕೊಡಲಾಗುವುದು ಎಂದರು. ಶ್ರೀರಾಮ ಸೇನೆಯಿಂದ ಮನವಿ: ಇದೇ ವೇಳೆ ಶ್ರೀರಾಮ ಸೇನಾ ಹಿಂದೂಸ್ತಾನ ಘಟಕದ ಕಾರ್ಯಕರ್ತರು ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಸಾನ್ನಿಧ್ಯದಲ್ಲಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲೂಕು ಘಟಕ ಅಧ್ಯಕ್ಷ ರವಿ ಸವಟಗಿ, ನಗರ ಘಟಕ ಅಧ್ಯಕ್ಷ ವಿಜಯ ಪೂಜೇರ, ಕಾರ್ಯಕರ್ತರು ಇದ್ದರು.