ಅಥಣಿ

ಅಭಿಮಾನಿಗಳಿಂದ ಗಜಾನನ ಮಂಗಸೂಳಿಯವರ ಜನ್ಮದಿನ ಆಚರಣೆ

ಅಭಿಮಾನಿಗಳಿಂದ ಗಜಾನನ ಮಂಗಸೂಳಿಯವರ ಜನ್ಮದಿನ ಆಚರಣೆ

ಅಥಣಿ 14: ಕಾಂಗ್ರೆಸ್ ಪಕ್ಷದ ಧುರೀಣರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ನನ್ನ ಜನ್ಮದಿನದ ಅಂಗವಾಗಿ ವಿವಿಧ ವಿಧಾಯಕ ಮತ್ತು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ನಾನು ಸರ್ವರಿಗೂ ಚಿರ ಋಣಿಯಾಗಿರುವೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು. 

ಅವರು ತಮ್ಮ 53 ನೇ ಹುಟ್ಟು ಹಬ್ಬದ ನಿಮಿತ್ತ ಎ.ಕೆ.ಹೈಸ್ಕೂಲ ಮೈದಾನದಲ್ಲಿ ಗಜಾನನ ಮಂಗಸೂಳಿ ಅಭಿಮಾನಿ ಬಳಗ ಆಯೋಜಿಸಿದ್ದ ಬೈಕ್ ರಾ​‍್ಯಲಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ನನ್ನ ಅಭಿಮಾನಿಗಳು ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು ಹಾಗೂ ಇದೇ ಸಂದರ್ಭದಲ್ಲಿ ಪಟ್ಟಣದ ಎಲ್ಲ 21 ಪ್ರಮುಖ ವೃತ್ತಗಳಲ್ಲಿರುವ ಮಹಾ ವ್ಯಕ್ತಿಗಳ ಪುತ್ಥಳಿಗಳಿಗೆ ಹಾಗೂ ಕಟೌಟ್ ಗಳಿಗೆ ಮಾಲಾರೆ​‍್ಣ ಕೂಡ ಮಾಡಲಾಗುವುದು ಎಂದರು. 

ಜನ್ಮ ದಿನದ ಅಂಗವಾಗಿ 25ಅಡಿ ಉದ್ದದ ಬೃಹತ್ ಗುಲಾಬಿ ಹೂವಿನ ಮಾಲೆಯನ್ನು ಅಭಿಮಾನಿಗಳು ಕ್ರೇನ್ ಮುಖಾಂತರ ಗಜಾನನ ಮಂಗಸೂಳಿಯವರಿಗೆ ಹಾಕಿ ಉತ್ಸಾಹ ಇಮ್ಮಡಿಗೊಳಿಸಿದರು. ಬೈಕ್ ರಾ​‍್ಯಲಿಯಲ್ಲಿ ತೆರಳುವ ಮಧ್ಯದಲ್ಲಿ ಗಜಾನನ ಮಂಗಸೂಳಿಯವರ ಜನ್ಮ ದಿನದ ನಿಮಿತ್ಯ ಅನೇಕ ಗಣ್ಯಮಾನ್ಯರು ಹಾರ ಹಾಕಿ ಸತ್ಕರಿಸಿದರು. ಪ್ರತಿ ವೃತ್ತದಲ್ಲಿಯೂ ಸಹ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಗಣ್ಯರಾದ ಅಸ್ಲಂ ನಾಲಬಂದ, ಸೈಯ್ಯದ ಅಮೀನ ಗದ್ಯಾಳ, ವೀಲೀನ ಯಳಮಲ್ಲೆ, ಶ್ರೀಕಾಂತ ಪೂಜಾರಿ, ಸಿದ್ಧಾರ್ಥ ಸಿಂಗೆ, ಶಿವು ಗುಡ್ಡಾಪುರ, ರಾವಸಾಬ ಐಹೊಳೆ, ರೇಖಾ ಪಾಟೀಲ, ಸುನಿತಾ ಐಹೊಳೆ, ಉದಯ ಸೊಳಸಿ, ಬಸು ಹಳ್ಳದಮಳ, ರಮೇಶ ಪವಾರ, ಪ್ರಮೋದ ಬಿಳ್ಳೂರ, ಬೀರ​‍್ಪ ಯಕ್ಕಂಚಿ, ಬಾಬು ಖೆಮಲಾಪುರ, ರಿಯಾಜ ಸನದಿ, ಸೈಯ್ಯದ ಗಡ್ಡೇಕರ ಸೇರಿದಂತೆ ಗಜಾನನ ಮಂಗಸೂಳಿ ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ