ಸೌಂದತ್ತಿ

ಗಜಾನನ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಮಡ್ಲಿ ಭೂಮಿ ಪೂಜೆ

ಗಜಾನನ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಮಡ್ಲಿ ಭೂಮಿ ಪೂಜೆ

ಸವದತ್ತಿ 26: ಪಟ್ಟಣದ ಕಟ್ಟಿ ಓಣಿಯ ಗಜಾನನ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಪುರಸಭೆ ಸದಸ್ಯ ಧರೆಪ್ಪ ಮಡ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತಡಿಯಲ್ಲಿ ದಿ.ಆನಂದ ಮಾಮನಿಯವರು ಕೊಟ್ಟ ಭರವಸೆಯಂತೆ ಒಂಭತ್ತು ಲಕ್ಷರೂಪಾಯಿಗಳನ್ನು ದೇವಸ್ಥಾನದ ಅಭಿವೃದ್ದಿಗೆ ಇಲಾಖೆಯಿಂದ ಮಂಜೂರು ಮಾಡಿಸಿದ್ದರು.

ರತ್ನಕ್ಕ ಆನಂದ ಮಾಮನಿಯವರು ಭಾಗವಹಿಸಿ ಮಾತನಾಡಿ, ಯಜಮಾನರು ದೇವಸ್ಥಾನಗಳ ಅಭಿವೃದ್ದಿಗೆ ಹೆಚ್ಚಿನ ಮಹತ್ವ ಕೊಟ್ಟು  ತಾಲೂಕಿನ ಎಲ್ಲ ದೇವಸ್ಥಾನಗಳನ್ನು ಅಭಿವೃದ್ದಿ ಪಡಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ.  ಈ ಧಾರ್ಮಿಕ ಕಾರ್ಯಗಳನ್ನು ನಾನು ಮುಂದೆ ವರೆಯಿಸಿಕೊಂಡು ಹೋಗುವದಾಗಿ ಹೇಳಿದರು.

ದೇವಸ್ಥಾನದ ಅರ್ಚಕರಾದ ದಿರೇಂದ್ರ ಕಾನಡೆ ದಂಪತಿಗಳು ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು ರತ್ನಕ್ಕ ಮಾಮನಿಯವರನ್ನು ಸನ್ಮಾನಿಸಿ ಗೌರವಿಸಿದರು

ಗಜಾನನ ಜನ್ಮ ದಿನದ ಅಂಗವಾಗಿ ದೇವಸ್ಥಾನದಲ್ಲಿ ಮುಂಜಾನೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ತೊಟ್ಟಿಲೋತ್ಸವ ನಂತರ ಹೊಮ ಹವನಗಳನ್ನು ಗುರುರಾಜಾಚಾರ್ಯ ಕಟ್ಟಿ ಹಾಗೂ ಸುನಿಲಾಚಾರ್ಯ ಗದಗ ರವರು ನಡೆಸಿಕೊಟ್ಟರು. 

ಕಾರ್ಯಕ್ರಮದಲ್ಲಿ ದೇವಸ್ಥಾನದ ವತಿಯಿಂದ ಧರೆಪ್ಪ ಮಡ್ಲಿ. ಎಚ್ ಡಿ ಠಕ್ಕಳಕಿ, ವಾಸುದೇವ ಕರಿಕಟ್ಟಿ, ಡಾ ಚಿದಂಬರ ಕುಲಕರ್ಣಿ  ಯವರನ್ನು ಸನ್ಮಾನಿಸಿ ಗೌರವಿಸಲಾಯಿತು 

ಬೇಡಸೂರ ಚಿದಂಬರೇಶ್ವರ ದೇವಸ್ಥಾನದ ಎಚ್.ಡಿ.ಠಕ್ಕಳಕಿಯವರು ಸಾನ್ನಿಧ್ಯ ವಹಿಸಿದ್ದರು. ಬ್ರಾಹ್ಮಣ ಸಮಾಜದ ಅದ್ಯಕ್ಷ ಚಿದಂಬರ ಕುಲಕರ್ಣಿ , ವೆಂಕಟೇಶ ವೈದ್ಯ ದಂಪತಿಗಳು. ಡಾ ಚಿದಂಬರ ಕುಲಕರ್ಣಿ  ರಾಜು ಕುಲಕರ್ಣಿ, ಬಂಡು ಕುಲಕರ್ಣಿ . ವಿಲಾಸ ಪಾಟೀಲ, ಬಾಳು ದೇಸಾಯಿ, ವಾಸುದೇವ ಕುಲಕರ್ಣಿ. ವಿಜೇಂದ್ರ ಜ್ಯೋಶಿ, ಶೀಲಾ ದೇಶಪಾಂಡೆ, ಗೀತಾ ಕಾನಡೆ, ಸುಮಾ  ರಾಮರ್ಥಿ, ಸಂಜು ಕವಲಗುಡ್ಡ, ಮುರಳಿಧರ ದೆಸಾಯಿ, ಜಯಣ್ಣ ಘಾನೇಕರ, ಬಸವರಾಜ ಮಡಿವಾಳರ ಸೇರಿದಂತೆ ಬ್ರಾಹಣ ಸಮಾಜದ ಮುಖಂಡರು ಹಾಗೂ ಮಹಿಳಾ ಮಂಡಳಗಳ ಸದಸ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ