ರಾಷ್ಟ್ರೀಯ

ಲಾಟರಿಗೆ ಶೇ 28 ರಷ್ಟು ಜಿ ಎಸ್ ಟಿ

ಲಾಟರಿಗೆ ಶೇ 28 ರಷ್ಟು ಜಿ ಎಸ್ ಟಿ

ನವದೆಹಲಿ, ಡಿ 19  ಲಾಟರಿ ಮೇಲಿನ ಸರಕು ಮತ್ತು ಸೇವಾ ತೆರಿಗೆ ಜಿ ಎಸ್ ಟಿ ಯನ್ನು ಶೇ 28 ಕ್ಕೆ ಹೆಚ್ಚಿಸಲು ಜಿ ಎಸ್ ಟಿ ಮಂಡಳಿ ನಿರ್ಧರಿಸಿದೆ.  ಎಲ್ಲಾ ರಾಜ್ಯ ಸ್ವಾಮ್ಯದ ಮತ್ತು ಖಾಸಗಿ ಲಾಟರಿಗಳ ಮೇಲೆ ಶೇ 28 ರಷ್ಟು ಜಿ ಎಸ್ ಟಿ ವಿಧಿಸುವ ಬಗ್ಗೆ ಬುಧವಾರ ನಡೆದ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.   ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ಲಾಟರಿ ಮತ್ತು ಬ್ಯಾಗ್ ಗಳ ಮೇಲಿನ ಪರಿಷ್ಕೃತ ಜಿ ಎಸ್ ಟಿ ದರ ಮುಂದಿನ ವರ್ಷದ ಮಾರ್ಚ್ 1 ರಿಂದ ಅನ್ವಯವಾಗಲಿದೆ ಎಂದರು.  ಜಿ ಎಸ್ ಟಿ ದರ ಪರಿಷ್ಕರಣೆ ಮತ್ತು ರಾಜ್ಯಗಳಿಗೆ ನೀಡಬೇಕಾದ ಪರಿಹಾರ ಬಗ್ಗೆ ರಾಜ್ಯಗಳು ತಮ್ಮ ತಮ್ಮ ನಿಲುವನ್ನು ಸಭೆಯಲ್ಲಿ ತಿಳಿಸಿವೆ ಎಂದು ಅವರು ಹೇಳಿದರು.  ದೀರ್ಘಾವಧಿ ಲೀಸ್ ಮೇಲಿನ ಕೈಗಾರಿಕಾ ಮತ್ತು ಹಣಕಾಸು ಮೂಲಸೌಕರ್ಯ ನಿವೇಶನಗಳಿಗೆ ವಿಧಿಸಲಾಗುವ ಮುಂಗಡ ಹಣಪಾವತಿಯ ನಿಯಮಾವಳಿಯಲ್ಲೂ ಸಡಿಲಿಕೆ ಮಾಡಲಾಗಿದೆ. ಈ ಮೊದಲು ಕೇಂದ್ರ ಮತ್ತು ರಾಜ್ಯ ಸ್ವಾಮ್ಯತ್ವ ಶೇ 50 ಕ್ಕಿಂತ ಹೆಚ್ಚಿದ್ದಲ್ಲಿ ಮಾತ್ರ  ಈ ವಿನಾಯಿತಿ ಇದ್ದು ಈಗ ಸ್ವಾಮ್ಯತ್ವದ ಮಿತಿಯನ್ನು ಶೇ 20 ಕ್ಕೆ ಇಳಿಸಲಾಗಿದೆ.  ಈ ನಿಯಮ ಜನವರಿ 1 ರಿಂದ ಅನ್ವಯವಾಗಲಿದೆ.   ತೆರಿಗೆ ಪಾವತಿದಾರರ ಸಮಸ್ಯೆ ನಿವಾರಣೆಗೆ ವಲಯ ಮತ್ತು ರಾಜ್ಯ ಮಟ್ಟದಲ್ಲಿ ಕುಂದುಕೊರತೆ ಸಮಿತಿ ರಚಿಸುವ ಬಗ್ಗೆಯೂ ಮಂಡಳಿ ಶಿಫಾರಸ್ಸು ಮಾಡಿದೆ.  

ಸುದ್ದಿ ಓದಿ