ಕೋವಿಡ್-೧೯ ಸೋಂಕು ನಿಯಂತ್ರಣ, ನಿರ್ವಹಣೆ ಸವಾಲು ಎದುರಿಸುವ ಕುರಿತಾದ ಮೂರು ದಿನಗಳ ಗ್ರ್ಯಾಂಡ್ ಚಾಲೆಂಜ್ ಸಮಾವೇಶ: ಮೋದಿ ಭಾಷಣ
ನವದೆಹಲಿ, ಅ 19 :ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಕುರಿತು ಜಾಗತಿಕವಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಇಂದಿನಿಂದ ಕೇಂದ್ರ ಸರ್ಕಾರ ಮತ್ತು ಮಿಲಿಂದಾ ಗೇಟ್ಸ್ ಸಹಯೋಗದಲ್ಲಿ ಮೂಲಕ ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ 2020 ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 7.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಲಿದ್ದಾರೆ.
ಜಾಗತಿಕ ಆರೋಗ್ಯ ಸಮಸ್ಯೆಗಳು, ಅದರಲ್ಲೂ ವಿಶೇಷವಾಗಿ ಕೋವಿಡ್-೧೯ ಸೋಂಕು ನಿಯಂತ್ರಣ, ನಿರ್ವಹಣೆಯ ಸವಾಲುಗಳನ್ನು ಎದುರಿಸುವ ಕುರಿತು ವಿಸ್ತೃತ ಸಮಾಲೋಚನೆ ನಡೆಯಲಿದೆ. ವೈಜ್ಞಾನಿಕ ವಲಯದ ಸಹಕಾರ, ಸಾಂಕ್ರಾಮಿಕ ನಿರ್ವಹಣೆ ಮತ್ತು ಅಭಿವೃದ್ಧಿಗೆ ಚುರುಕು ನೀಡುವುದು ಸೇರಿದಂತೆ ಹಲವು ಆಯಾಮಗಳ ಕುರಿತು ವಿಶೇಷ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಈ ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ ಸಭೆ ೨೦೨೦ಯ ಸಹ ಆತಿಥ್ಯವನ್ನು, ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಷನ್, ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಜೈವಿಕ ತಂತ್ರಜ್ಞಾನ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ನೀತಿ ಆಯೋಗ, ಕೆನಡಾದ ಗ್ರ್ಯಾಂಡ್ ಚಾಲೆಂಜಸ್ ಮತ್ತು ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಮತ್ತು ವೆಲ್ಕಮ್ ಏಜೆನ್ಸಿ ವಹಿಸುತ್ತಿವೆ. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಷನ್ ನ ಸಹ ಅಧ್ಯಕ್ಷ ಬಿಲ್ ಗೇಟ್ಸ್ ಸಮಾವೇಶದ ಸಮಾಲೋಚನೆಗಳ ವಿವರಗಳನ್ನು ಒದಗಿಸಲಿದ್ದಾರೆ.
ಗ್ರ್ಯಾಂಡ್ ಚಾಲೆಂಜರ್ಸ್‌ನ ವಾರ್ಷಿಕ ಸಭೆ ಕಳೆದ ೧೫ ವರ್ಷಗಳಿಂದ ನಡೆಯುತ್ತಿದ್ದು, ಆರೋಗ್ಯ ಮತ್ತು ಅಭಿವೃದ್ಧಿ ವಿಚಾರದಲ್ಲಿ ಎದುರಾಗುವ ದೊಡ್ಡ ಸವಾಲುಗಳನ್ನು ಅಂತಾರಾಷ್ಟ್ರೀಯ ಆವಿಷ್ಕಾರ ಸಹಭಾಗಿತ್ವದ ಮೂಲಕ ಎದುರಿಸಲು ನೆರವಾಗುತ್ತಿದೆ. ನೀತಿ ನಿರೂಪಕರು ಮತ್ತು ವೈಜ್ಞಾನಿಕ ವಲಯದ ನಾಯಕರು ಒಂದೆಡೆ ಸಮಾವೇಶಗೊಳ್ಳುತ್ತಿದ್ದು. ‘ಜಗತ್ತಿಗಾಗಿ ಭಾರತ’ ಎನ್ನುವ ಘೋಷಣೆ ಅಡಿ ವೈಜ್ಞಾನಿಕ ಸಹಭಾಗಿತ್ವದ ಬಲವರ್ಧನೆಗೆ ಆದ್ಯತೆ ನೀಡಲಾಗುತ್ತಿದೆ.ವಿಶ್ವದಾದ್ಯಂತ ಇರುವ ಜಾಗತಿಕ ನಾಯಕರು, ಪ್ರಮುಖ ವಿಜ್ಞಾನಿಗಳು ಮತ್ತು ಸಂಶೋಧಕರು ಈ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದು, ಅವರು ಸಾಂಕ್ರಾಮಿಕದ ನಂತರದ ಜಗತ್ತಿನಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಗೆ ಇನ್ನಷ್ಟು ಪುಷ್ಟಿ ನೀಡುವ ಕುರಿತಂತೆ ಚರ್ಚೆ ನಡೆಸಲಿದ್ದಾರೆ. . ಈ ವಾರ್ಷಿಕ ಸಭೆಯಲ್ಲಿ ಜಗತ್ತಿನ ೪೦ ರಾಷ್ಟ್ರಗಳ ಸುಮಾರು ಒಂದು ಸಾವಿರದ ೬೦೦ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.