ಹೊಸಪೇಟೆ

ನೀರು ಶುದ್ಧೀಕರಣ ಘಟಕಕ್ಕೆ ಜಿಪಂ ಸಿಇಒ ಭೇಟಿ

ನೀರು ಶುದ್ಧೀಕರಣ ಘಟಕಕ್ಕೆ ಜಿಪಂ ಸಿಇಒ ಭೇಟಿ

ಹೊಸಪೇಟೆ(ವಿಜಯನಗರ),ಆ.26: ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ ನೀರು ಶುದ್ದೀಕರಣ ಘಟಕಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ಪಾಪಿನಾಯಕನಹಳ್ಳಿ ಒಳಗೊಂಡಂತೆ ಒಟ್ಟು ಒಂಭತ್ತು ಗ್ರಾಮಗಳಿಗೆ ಶುದ್ದ ಕುಡಿಯುವ ನೀರು ಸರಬರಾಜು ಆಗುವ ಘಟಕದಲ್ಲಿ ನೀರು ಶುದ್ದೀಕರಣ ಘಟಕದ ನಿರ್ವಹಣೆ ಕುರಿತಂತೆ ಮಾಹಿತಿ ಪಡೆದುಕೊಂಡರು. ಯಾವುದೇ ಕಾರಣ ನೀರು ಕಲುಷಿತಗೊಳ್ಳದಂತೆ ನಿರಂತರ ಎಚ್ಚರ ವಹಿಸಲು ಸೂಚನೆ ನೀಡಿದರು. ನಿಯಮಿತವಾಗಿ ಟ್ಯಾಂಕಿಗಳ ಸ್ವಚ್ಚತೆಗೆ ಕ್ರಮವಹಿಸಬೇಕು ಎಂದು ಸೂಚಿಸಿದರು. 

ಈ ಸಂದರ್ಭದಲ್ಲಿ ಹೊಸಪೇಟೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀರೇಶ ಮತ್ತು ಸಹಾಯಕ ಎಂಜಿನಿಯರ್ ಸತೀಶ್ ಘಟಕದ ಪೂರ್ಣ ವಿವರ ನೀಡಿದರು. 

ಸುದ್ದಿ ಓದಿ