ನಿರಂತರ ಅಧ್ಯಯನದಿಂದ ಭವಿಷ್ಯತ್ತಿನ ಕನಸನ್ನು ನನಸಾಗಿಸಿಕೊಳಬೇಕು: ವೈಭವ ಚೌಹಾನ್
ಮಾಂಜರಿ 06: ಶಿಕ್ಷಣ ಜ್ಞಾನವೇ ಶ್ರೇಷ್ಠ. ಅದು ಎಲ್ಲಕ್ಕಿಂತಲೂ ಮಿಗಿಲು. ಸತತ ಓದು, ನಿರಂತರ ಅದ್ಯಯನದಿಂದ ಭವಿಷ್ಯತ್ತಿನ ಕನಸನ್ನು ನನಸಾಗಿಸಿಕೊಳಬೇಕು. ಆಸಕ್ತಿದಾಯಕ ಕಲಿಕೆಯಿಂದ ಜ್ಞಾನದ ಬೆಳಕಿನಲ್ಲಿ ಹೆಜ್ಜೆ ಗುರುತು ಮೂಡಿಸಬೇಕು ಎಂದು ಬೆಳಗಾವಿಯ ಸಾಫ್ಟ್ವೇರ್ ಡೆವಲಪರ್ ಆದ ವೈಭವ ಚೌಹಾನ್ ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಕೆಎಲ್ಇ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಬಿಸಿಎ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು ಈ ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಮಹಾವಿದ್ಯಾಲಯದ ಆಚಾರ್ಯರಾದ ಎಂಎಸ್ ಕಾನಡೆ ವಹಿಸಿದ್ದರು ಉಪಸ್ಥಿತ ಗಣ್ಯರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಕಾನಡೆ ಮಾತನಾಡಿ ಭವಿಷ್ಯ ತಿನ ಉದ್ಯೋಗಕ್ಕೆ ಬೇಕಾಗಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಲು ಬೇಕೆಂದು ಅವರು ಹೇಳಿದರು.
ಈ ಕಾರ್ಯಕ್ರಮಕ್ಕೆ ಎಲ್ಲ ಸಿಬ್ಬಂದಿ ವರ್ಗ ಹಾಗೂ ಕೆಎಲಿ ಸಂಸ್ಥೆಯ ಅಂಗಸಂಸ್ಥೆಯ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿ ಮತ್ತು ಪಾಲಕರು ಹಾಜರಿದ್ದರು ಅಶ್ವಿನಿ ಬಡಿಗೇರ್ ಸ್ವಾಗತಿಸಿದರು ಕುಮಾರಿ ಶ್ರೇಯಾ ನಿರೂಪಿಸಿದರು ಗಣೇಶ್ ರುಪಣ್ಣವರ್ ವಂದಿಸಿದರು.