ರಾಷ್ಟ್ರೀಯ

ಕಾಶ್ಮೀರದಲ್ಲಿ ನಿರಂತರ ಮಳೆ, ತಾಪಮಾನ ಮತ್ತಷ್ಟು ಕುಸಿತ

ಕಾಶ್ಮೀರದಲ್ಲಿ ನಿರಂತರ ಮಳೆ, ತಾಪಮಾನ ಮತ್ತಷ್ಟು ಕುಸಿತ

ಶ್ರೀನಗರ, ಆಗುಸ್ಟ್ 27: ಕಾಶ್ಮೀರ ಕಣಿವೆಯಲ್ಲಿ ಸತತ ಎರಡನೇ ದಿನವೂ ಭಾರಿ ಮಳೆ ಮುಂದುವರಿದಿದ್ದು, ಇದರಿಂದ ತಾಪಮಾನವು ಮತ್ತಷ್ಟು ಕುಸಿಯುವುದರೊಂದಿಗೆ  ಶ್ರೀನಗರ ಮತ್ತು ಕಣಿವೆಯ ಇತರ ಭಾಗಗಳಲ್ಲಿ ಹವಾಮಾನ ಸಂಬಂಧಿತ ತೊಂದರೆಗಳಲ್ಲಿ ಜನ ಸಿಲುಕಿದ್ದಾರೆ.


ಈ ಮಧ್ಯೆ, ಮುಂದಿನ 12 ಗಂಟೆಗಳ ಕಾಲ ಕಣಿವೆಯಲ್ಲಿ ಚದುರಿದಂತೆ ಭಾರಿ ಮಳೆ ಮತ್ತು ಗಂಟೆಗೆ 30 ಕಿ.ಮೀ ನಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ಬುಧವಾರ ಬೆಳಿಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಜಲಾವೃತಗೊಂಡು, ತಾಪಮಾನ ಕುಸಿಯುವುದರೊಂದಿಗೆ  ಜನರು ತೊಂದರೆಗಳನ್ನು ಎದುರಿಸುತ್ತಿದ್ದಾರೆ.    


ಜೀಲಂ ನದಿ ಮತ್ತು ಅದರ ಉಪನದಿಗಳಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆ ಕಂಡುಬಂದಿದ್ದರೂ ತಕ್ಷಣ ಪ್ರವಾಹದ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಮುಂದಿನ 12 ಗಂಟೆಗಳಲ್ಲಿ ವ್ಯಾಪಕವಾಗಿ ಮಧ್ಯಮದಿಂದ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ವಕ್ತಾರರು ಯುಎನ್‌ಐಗೆ ತಿಳಿಸಿದ್ದಾರೆ. ಮುಂದಿನ 12 ಗಂಟೆಗಳಲ್ಲಿ ಚದುರಿದಂತೆ ಭಾರಿ ಮಳೆ ಮತ್ತು ಗುಡುಗು ಸಹಿತ ಗಾಳಿ (ಗಂಟೆಗೆ 30 ರಿಂದ 40 ಕಿ.ಮೀ) ಬೀಸಲಿದೆ. ಶುಕ್ರವಾರ ಮಧ್ಯಾಹ್ನದಿಂದ ಹವಾಮಾನ ಸುಧಾರಿಸುವ ಸಂಭವವಿದೆ ಎಂದು ಅವರು ಹೇಳಿದ್ದಾರೆ.


ಬುಧವಾರ ಬೆಳಿಗ್ಗೆಯಿಂದ ಇಲ್ಲಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಉತ್ತರ ಕಾಶ್ಮೀರದ ಗುಲ್ಮಾರ್ಗ್‌ನ ವಿಶ್ವಪ್ರಸಿದ್ಧ ಸ್ಕೀ ರೆಸಾರ್ಟ್‌ನಲ್ಲಿ ಭಾರಿ ಮಳೆಯಾಗಿದೆ. ಸ್ಕೀ ರೆಸಾರ್ಟ್‌ನಲ್ಲಿ ಗುರುವಾರ ರಾತ್ರಿ 8.30 ರವರೆಗೆ 43.8 ಮಿ.ಮೀ ಮಳೆಯಾಗಿದೆ.  

ಸುದ್ದಿ ಓದಿ