ಪೀಠೋಪಕರಣಗಳ ಉದ್ಘಾಟನಾ ಕಾರ್ಯಕ್ರಮದಲಿ; ಶಾಸಕ ಮಾಹಾಂತೇಶ್ ಕೌಜಲಗಿ
ಬೈಲಹೊಂಗಲ, 07 ; ಜನಪ್ರಿಯ ಶಾಶಕರಾದ ಶ್ರೀ ಮಹಾಂತೇಶ್ ಕೌಜಲಗಿ ರವರು ಸರಕಾರಿ ಮಾದರಿ ಕನ್ನಡ ಶಾಲೆ, ಉಡಿಕೇರಿ ತಾಲೂಕ ಬೈಲಹೊಂಗಲ ದಲ್ಲಿ ಪೀಠೋಪಕರಣಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉದ್ಘಾಟಿಸಿ, ದೇಣಿಗೆಯಾಗಿ ಸುಮಾರು 80 ಸಾವಿರ ವೆಚ್ಚದಲ್ಲಿ ಶಿವಗಂಗವ್ವ ಹಿತ್ತಲಮನಿ ರವರು ಶಾಲೆಗೆ 20 ಡೆಸ್ಕ್ಗಳನ್ನು, ಬಸವಣ್ಣೆವ್ವ ಗೂಳಪ್ಪನವರ ರವರು 6000 ವೆಚ್ಚದಲ್ಲಿ ಒಂದು ಟ್ರೆಜೂರಿಯನ್ನು ಮತ್ತು ರುದ್ರವ್ವ ಬಿಂಗಿ ರವರು ಸುಮಾರು 4000 ರೂಪಾಯಿ ವೆಚ್ಚದಲ್ಲಿ ಒಂದು ಪುಸ್ತಕ ಇಡುವ ರ್ಯಾಕ್ ನ್ನು ನೀಡಿರುತ್ತಾರೆ. ಇವರುಗಳಿಗೆ ಶಾಸಕರು, ಗ್ರಾಮಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು, ಖಆಒ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಕ್ಷೆತ್ರ ಶಿಕ್ಷಣಾ ಅಧಿಕಾರಿಕರಿಗಳು, ಸಂಪನ್ಮೂಲ ವ್ಯಕ್ತಿಗಳು, ಊರಿನ ಹಿರಿಯರು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಾಲೆಯ ಸಹ ಶಿಕ್ಷಕರಾದ ಬಸವರಾಜ್ ಕಿಲ್ಲೆದಾರ ನಡೆಸು ನೆರವೇರಿಸಿಕೊಟ್ಟರು, ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಗೂ ಸ್ವಾಗತ ಭಾಷಣವನ್ನು ಪ್ರಬಾರಿ ಮುಖ್ಯೋಪಾಧ್ಯಾಯರಾದ ಎಸ್ಎಸ್ಸಿ ಹುಂಬಿ ಅವರ ನಡುವೆ ನೆರವೇರಿಸಿಕೊಟ್ಟರು