ರಾಣಿಬೆನ್ನೂರಲ್ಲಿ ಸರ್ವ ಧರ್ಮ ಸಾಮೂಹಿಕ ವಿವಾಹ ನವ ವಧುವರರಿಗೆ ಧನಸಹಾಯ: ಪ್ರಕಾಶ್ ಬುರುಡಿಕಟ್ಟಿ
ರಾಣೆಬೆನ್ನೂರು 08: ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತಿಕ, ಧಾರ್ಮಿಕ ಸೇವಾ ಕಾರ್ಯಗಳ ಮೂಲಕ ಯಾವುದೇ ಪ್ರತಿಫಲಾ ಫೆಕ್ಷ ಬಯಸದೆ, ಸಂಸ್ಥೆ ಅಭಿಮಾನಿಗಳ ಸಹಾಯ ಸಹಕಾರದಿಂದ ಸಮಾಜಮುಖಿ ಸೇವೆ ಸಲ್ಲಿಸುತ್ತಲಿದೆ ಎಂದು ಸಂಸ್ಥೆಯ ಅಧ್ಯಕ್ಷ, ನಗರಸಭಾ ಸದಸ್ಯ ಪ್ರಕಾಶ್ ಎಸ್. ಬುರಡಿಕಟ್ಟಿ ಹೇಳಿದರು. ಅವರು ಸೋಮವಾರ ಮಧ್ಯಾಹ್ನ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಏರಿ್ಡಸಲಾಗಿದ್ದ, ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ದೈವಾನುಕೂಲ ವೆಂಬಂತೆ, ನವೆಂಬರ್ 28 2022 ರಂದು ತಮ್ಮ ವಿವಾಹ ನಡೆಯಲಿದೆ. ಇದೇ ಸಂದರ್ಭದಲ್ಲಿ ತಮ್ಮ ಕುಟುಂಬ ಪರಿವಾರದವರ, ಹಿರಿಯರ ಮತ್ತು ಅಭಿಮಾನಿಗಳ ಅಪೇಕ್ಷೆ ನಿರ್ಧಾರದಂತೆ ಅಂದೆ 123 ಜೊತೆ ಸರ್ವಧರ್ಮಗಳ ಸಾಮೂಹಿಕ ಉಚಿತ ವಿವಾಹ ಮಹೋತ್ಸವ ಮಂಗಲ ಕಾರ್ಯವು ನೆರವೇರಿಸಲಾಗುವುದು.
ವಿವಾಹಿತರಿಗೆ ದೋತ್ರ, ಶರ್ಟ, ಟವೆಲ್ ಮತ್ತು ವಧುವಿಗೆ ಸೀರೆ ಬ್ಲೌಸ್. ಪೀಸ್, ಚಿನ್ನದ ಮಾಂಗಲ್ಯ ಬೆಳ್ಳಿ ಕಾಲುಂಗುರ, ಹಾಗೂ ಕಡಗ ಕೊಡಲಾಗುವುದು. ಅಲ್ಲದೆ ನವ ದಂಪತಿಗಳ ಜೀವನೋಪಾಯಕ್ಕಾಗಿ 25000 ರೂಪಾಯಿಗಳ ಆರ್ಥಿಕ ಸಹಾಯ ಕೊಡಲಾಗುವುದು. ಈಗಾಗಲೇ 103 ಜೋಡಿಗಳು ತಮ್ಮ ಹೆಸರನ್ನು ಸಮರ್ಕ ದಾಖಲಾತಿಗಳೊಂದಿಗೆ ನೋಂದಾಯಿಸಿದ್ದಾರೆ. ಇನ್ನೂ 20 ಜೋಡಿಗಳಿಗೆ ಮಾತ್ರ ಹೆಸರು ನೋಂದಾಯಿಸಲು ಅವಕಾಶವಿದೆ. ನವೆಂಬರ್ 20 ,2022 ರಂದು ನೋಂದಾವಣಿಗೆ ಅಂತಿಮ ದಿನವಾಗಿದೆ ಎಂದರು. ವಾಣಿಜ್ಯ ನಗರದ ನಗರಸಭಾ ತಾಲೂಕ ಕ್ರೀಡಾಂಗಣ. ಸಾಮೂಹಿಕ ವಿವಾಹ ಕಾರ್ಯಗಳು ಜರುಗಲಿವೆ. ಹೆಸರು ನೋಂದಾಯಿಸಿದವರು 27ರಂದು ತಮ್ಮ ತಮ್ಮ ಮನೆಗಳಲ್ಲಿ ವಿವಾಹಪೂರ್ವ ಎಲ್ಲ ರೀತಿಯ ವಿಧಿ ವಿಧಾನಗಳನ್ನು ನೆರವೇರಿಸಿಕೊಂಡು 28ರ ಬೆಳಿಗ್ಗೆ ವಿವಾಹ ಸ್ಥಳಕ್ಕೆ ಆಗಮಿಸಬೇಕು, ಅಲ್ಲಿ ಸಾಮೂಹಿಕ ಪೂಜೆ, ಹೋಮ ಮತ್ತು ಮಾಂಗಲ್ಯ ಧಾರಣೆ ಆಯಾ ಧರ್ಮಕ್ಕನುಸಾರವಾಗಿ, ನೇಮಿಸಲಾದ ಪುರೋಹಿತರು ನೆರವೇರಿಸುವರು.
ಅದೇ ವೇದಿಕೆಯಲ್ಲಿ ತಾವು ಸಹ ಮಾಂಗಲ್ಯ ಧಾರಣೆ ನೆರವೇರಿಸಿಕೊಳ್ಳಲಾಗುವುದು ಎಂದರು. ನಗರವು ಸೇರಿದಂತೆ ತಾಲೂಕಿನ ಪ್ರತಿಯೊಂದು ಮನೆಗಳಿಗೆ ಆಮಂತ್ರಣ ಪತ್ರಿಕೆ ಜೊತೆಗೆ ಭಾರತೀಯರ ಸರ್ವಧರ್ಮ ಪ್ರಸಾರದ 75 ಸಾವಿರ ಮಹತ್ವಪೂರ್ಣ ಭಗವದ್ಗೀತೆ ಮಹಾ ಗ್ರಂಥವನ್ನು ಉಡುಗೊರೆಯಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಎಂದ ಅವರು, ಪ್ಯಾಸೆಂಜರ್ ಆಟೋ ಚಾಲಕರು, ನಗರ ಮತ್ತು ಗ್ರಾಮೀಣ ಪ್ರದೇಶದ ಬೀದಿ ಬದಿ ವ್ಯಾಪಾರಸ್ಥರು, ಮತ್ತಿತರೆ ವ್ಯಾಪಾರಸ್ಥರು, ಪೌರ ಕಾರ್ಮಿಕರು, ಪತ್ರಿಕಾ ವಿತರಕರು, ಆಶಾ ಕಾರ್ಯಕರ್ತೆಯರು, ದಾದಿಯರು, ಹೋಂ ಗಾಡ್ರ್ಸ್ಗಳು, ಗೂರ್ಖಾಗಳು, ಬೀದಿ ಬದಿ ಚರ್ಮಕಾರರು, ವೃದ್ಧಾಶ್ರಮಗಳ ಹಿರಿಯರು, ಅನಾಥರು, ಅಂದರು, ವಿಕಲಚೇತನರು ಸೇರಿದಂತೆ ಮತ್ತಿತರರಿಗೆ ಮದುವೆಯ ವಿಶೇಷ ಉಡುಗೊರೆ ತಲುಪಿಸಲು ಸಿದ್ಧತೆ ಮಾಡಲಾಗಿದೆ ಎಂದರು. ವಿವಾಹ ಮಹೋತ್ಸವದಲ್ಲಿ ಸುಧಾ ಮೂರ್ತಿ, ಸಿ.ಟಿ. ರವಿ, ಅರುಣ್ ಕುಮಾರ್ ಪೂಜಾರ್, ಆರ್ ಶಂಕರ್, ಡಾ: ಮಹೇಶ್ ಜೋಶಿ ಮತ್ತಿತರ ಗಣ್ಯರು ಪಾಲ್ಗೊಳ್ಳುವರುಹಿಂದಿನ ದಿವಸ 27ರಂದು ಕ್ರೀಡಾಂಗಣದ ಮದುವೆ ಮಂಟಪದಲ್ಲಿ ಭಾನುವಾರ ಸಂಜೆ 7:30ಕ್ಕೆ ಆರತಕ್ಷತೆ ನಡೆಯಲಿದ್ದು, ಗೌರಿಗದ್ದೆ ಅವಧೂತ ವಿನಯ ಗುರೂಜಿ ಅವರು ದಿವ್ಯ ಸಾನಿಧ್ಯ ವಹಿಸುವರು. ಅತಿಥಿಗಳಾಗಿ ಶಿವಕುಮಾರ್ ಉದಾಸಿ, ಚಲವಾದಿ ನಾರಾಯಣಸ್ವಾಮಿ, ರವಿ ಡಿ. ಚನ್ನಣ್ಣನವರ್, ರೂಪಾ ಚಿನ್ನಿಕಟ್ಟಿ, ಮೊದಲಾದವರು ಪಾಲ್ಗೊಳ್ಳುವರು. ಮಾಧ್ಯಮಗೋಷ್ಠಿಯಲ್ಲಿ ಅಜಯ್ ಮಠದ, ರೂಪಾ ಚಿನ್ನಿಕಟ್ಟಿ, ಪ್ರಭಾವತಿ ತಿಳುವಳ್ಳಿ, ನಾಗರಾಜ ಹಾರೋಗೂಪ್ಪ, ಶಿವಪ್ಪ ಹೆದ್ದೇರಿ, ರಾಘವೇಂದ್ರ ಚಿನ್ನಿಕಟ್ಟೆ, ಕಿರಣ್ ಅಂಗಡಿ, ಸೇರಿದಂತೆ ಸಂಸ್ಥೆಯ ಅನೇಕ ಪದಾಧಿಕಾರಿಗಳು ಗಣ್ಯರು, ಮುಖಂಡರು ಉಪಸ್ಥಿತರಿದ್ದರು.