ಬೈಲಹೊಂಗಲ

ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ: ಮಹಾಬಳೇಶ್ವರ

ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ: ಮಹಾಬಳೇಶ್ವರ

ಬೈಲಹೊಂಗಲ 22: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ರಾಷ್ಟ್ರ ಮಂದಿರ ಈ ಎರಡು ಒಟ್ಟಿಗೆ ನಿರ್ಮಾಣ ಮಾಡುವ ಕೆಲಸ ಬರದಿಂದ ನಡೆದಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಘಟನಾ ಕಾರ್ಯದರ್ಶಿ ಮಹಾಬಳೇಶ್ವರ ಹೆಗಡೆ ಹೇಳಿದರು.

ಪಟ್ಟಣಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರೊಂದಿಗೆ ಚರ್ಚಿಸಿ ಮಾತನಾಡಿದರು. 

‘ಹಣ ಕೊಟ್ಟರೆ ಒಂದೆರಡು ವರ್ಷದಲ್ಲಿ ರಾಮ ಮಂದಿರ ನಿರ್ಮಾಣವಾಗಿ ಬಿಡುತ್ತದೆ. ರಾಷ್ಟ್ರ ಮಂದಿರ ನಿರ್ಮಾಣವಾಗಬೇಕಾದರೆ ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕರು ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ತಮ್ಮದೆಯಾದ ಅತ್ಯಅಮೂಲ್ಯ ಕೊಡುಗೆ ನೀಡಬೇಕು. ಜೀವನದ ಸಾರ್ಥಕತೆ ಹೊಂದಬೇಕು’ ಎಂದರು.

ಮಾಜಿ ಶಾಸಕ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ವಿಶ್ವ ಹಿಂದೂ ಪರಿಷತ್ ಗೌರವ ಅಧ್ಯಕ್ಷ ಡಾ.ಚಿದಂಬರ ಕುಲಕರ್ಣಿ, ತಾಲ್ಲೂಕು ಘಟಕ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಮುಖಂಡರಾದ ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ ಇದ್ದರು.  

ಸುದ್ದಿ ಓದಿ