ಚಿಕ್ಕೋಡಿ

ಮಹಾತ್ಮರ ವಾಣಿ ಆಲಿಕೆಯಿಂದ ನೆಮ್ಮದಿ: ನಿಡಸೋಶ್ರೀ

ಮಹಾತ್ಮರ ವಾಣಿ ಆಲಿಕೆಯಿಂದ ನೆಮ್ಮದಿ: ನಿಡಸೋಶ್ರೀ

ಚಿಕ್ಕೋಡಿ 04: ವಿಜ್ಞಾನ ತಂತ್ರಜ್ಞಾನ ಆರ್ಥಿಕ ಭರಾಟೆಯಲ್ಲಿ ಇಂದಿನ ಯುಗದಲ್ಲಿ ಎಲ್ಲ ಜನರು ಒತ್ತಡದಲ್ಲಿ ಬದುಕುತ್ತಿದ್ದಾರೆ, ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಬೇಕೆಂದರೆ ಮಹಾತ್ಮರ ದಿವ್ಯ ದರ್ಶನ ಅವರವಾಣಿ ದಿವ್ಯ ಔಷಧವಿದ್ದಂತೆ. ಗ್ರಾಮದ ಮಂದಿರಗಳು ಭಕ್ತಿಯ ಆರಾಧನೆ ದ್ಯೋತಕವಾಗಿ ಸೇವಾ ಮನೋಭಾವನೆಯಿಂದ ಧಾರ್ಮಿಕ ಕಾರ್ಯದಲ್ಲಿ ತೊಡಗಬೇಕೆಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಭಕ್ತರಿಗೆ ಕರೆ ನೀಡಿದರು. 

ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ ಲಕ್ಷ್ಮೀದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಸಮಾರಂಭದ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.  ಪ್ರತಿಯೊಬ್ಬರಲ್ಲಿ ಭಕ್ತಿ ಭಾತೃತ್ವ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಪಾವನ ಮಾಡಿಕೊಳ್ಳಬೇಕೆಂದರು. 

ಬಸವಪ್ರಭು ಮಹಾರಾಜರು ಮಾತನಾಡಿ,  ದೇವರ ಹೆಸರಿನಲ್ಲಿ ಯಾವುದೇ ಅಂಧಕಾರ, ಮೂಢÀನಂಬಿಕೆಯಿಂದ ಪ್ರಾಣಿ ಬಲಿಕೊಡುವುದು ಬೇಡ. ಆದಿಶಕ್ತಿಗೆ ನಮ್ಮ ಭಾರತೀಯ ಪರಂಪರೆಯಲ್ಲಿ ಪೂಜ್ಯನೀಯ ಸ್ಥಾನವಿದೆ. ಹೃದಯದಲ್ಲಿಟ್ಟು ಪೂಜೆ ಮಾಡಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದರು. 

ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು, ಚಿಕ್ಕೋಡಿ ಸಂಪಾದನಾ ಮಹಾಸ್ವಾಮಿಗಳು ಕಳಸದ ಪೂಜೆ ಮಾಡಿದರು. ಕಮತೇನಟ್ಟಿಯ ಗುರುದೇವ ದೇವರು ಹಿತೋಪದೇಶ ನೀಡಿದರು. ವೇದಿಕೆಯ ಮೇಲೆ ಶಿವಪಂಚಾಕ್ಷರಿ ಮಹಾಸ್ವಾಮಿಗಳು, ಅಡಹಳ್ಳಟ್ಟಿ, ರುದ್ರಪ್ಪಾ ಸಂಗಪ್ಪಗೋಳ, ಶ್ರೀಧರ ಬಿ. ಪಾಟೀಲ, ಸುಭಾಷ ದುಂ. ಕರೊಲಿ, ಅರವಿಂದ ಮಾದರ, ದುಂಡಪ್ಪಾ ಸನದಿ, ತಿಪ್ಪಣ್ಣಾ  ಸನದಿ, ಶಿವಪುತ್ರ ಸಂಕೇಶ್ವರಿ, ಬಾಳಪ್ಪಾ ಸಂಕೇಸ್ವರಿ ಉಪಸ್ಥಿತರಿದ್ದರು. 

ಅಂದು ಬೆಳ್ಳಿಗ್ಗೆ ಪೂರ್ಣಕುಂಭ ವಾದ್ಯಮೇಳದೊಂದಿಗೆ ಮಹಾತ್ಮರನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ಚಿಕ್ಕೋಡಿ ಆಶಾದೀಪ ಸಮೂದಾಯ ಕಲಾಕೇಂದ್ರ ತಂಡದವರು ಭಕ್ತಿ ಸಂಗೀತಗಾಯನ ನಡೆಸಿಕೊಟ್ಟರು. ಡಾ. ಬಸು ಸಂಗಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿರು. ಭರತ ಕಲಾಚಂದ್ರ ಕಾರ್ಯಕ್ರಮ ನಿರೂಪಿಸಿದರು. ರಾಜಗೌಡರ ವಂದಿಸಿದರು. ಅದೇ ದಿನ ಸಾಯಂಕಾಲ ಲಕ್ಷ್ಮೀದೇವಿ ಡೊಳ್ಳಿನ ಗಾಯನ ಸಂಘ, ಇಟ್ನಾಳ, ಜೈ ಹನುಮಾನ ಡೊಳ್ಳಿನ ಗಾಯನ ಸಂಘ, ಶಿಂಧಿಹಟ್ಟಿ ಡೊಳ್ಳಿನ ಪದ ಕಲಾಪ್ರದರ್ಶನ ನೀಡಿ ಜನಮನ ರಂಜಿಸಿದರು.

ಸುದ್ದಿ ಓದಿ