ಶಿಗ್ಗಾವ್

ಮಕ್ಕಳಿಗೆ ಹಣ್ಣುಗಳ ಬಗ್ಗೆ ಅರಿವು ಮೂಡಿಸಲು ಹಣ್ಣುಗಳ ದಿನ : ಶಿವು ಹಾವೇರಿ

ಮಕ್ಕಳಿಗೆ ಹಣ್ಣುಗಳ ಬಗ್ಗೆ ಅರಿವು ಮೂಡಿಸಲು ಹಣ್ಣುಗಳ ದಿನ :  ಶಿವು ಹಾವೇರಿ

ಲೋಕದರ್ಶನ ವರದಿ 

ಶಿಗ್ಗಾವಿ 13: ಮಕ್ಕಳಿಗೆ ಹಣ್ಣುಗಳ ಬಗ್ಗೆ ಹಾಗೂ ಅದರಿಂದಾಗುವ ಉಪಯೋಗಗಳ ಬಗ್ಗೆ ತಿಳಿಸಲು ಹಣ್ಣುಗಳ ದಿನ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಪ್ರಾಚಾರ್ಯ ಶಿವು ಹಾವೇರಿ ತಿಳಿಸಿದರು. 

ಪಟ್ಟಣದ ಕುನ್ನೂರ ಇಂಟರನ್ಯಾಷನಲ್ ಆಂಗ್ಲ ಮಾಧ್ಯಮದಲ್ಲಿ ಎಲ್‌.ಕೆ.ಜಿ, ಯು.ಕೆ.ಜಿ, 1 ಮತ್ತು 2 ನೇ ವರ್ಗದ ಮಕ್ಕಳಿಗೆ ಹಣ್ಣುಗಳ ದಿನ ಕಾರ್ಯಕ್ರಮವನ್ನು ಮಕ್ಕಳಿಂದ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜಿಂಕ ಪುಡ ಮತ್ತು ಬೇಕರಿ ಪದಾರ್ಥ ಹಾಗೂ ಎಣ್ಣೆ ಪದಾರ್ಥಗಳಿಗೆ ಅವಲಂಬಿಸಿ ಬೇರೆ ಬೇರೆತರಹದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆಎಂದು ಸಂಶೋಧನೆ ಅಂಕಿ ಅಂಶಗಳನ್ನು ಮನಗಂಡು ಈ ಕಾರ್ಯಕ್ರಮ ಆಯೋಜಿಸಿ ಇದರ ಮೂಲಕ ಪಾಲಕರಿಗೆ ಮತ್ತು ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆಎಂದರು. 

ಹಣ್ಣುಗಳಲ್ಲಿ ಹೆಚ್ಚಿನ ಪೌಷ್ಠಿಕತೆ ಇರುವ ಪೋಷಕಾಂಶಗಳು, ಜೀವಸತ್ವಗಳು, ಪ್ರೋಟಿನಗಳು, ವಿಟಮಿನ, ಕ್ಯಾಲರಿಗಳು ಇರುತ್ತವೆಅಲ್ಲದೇ ಹಣ್ಣುಗಳನ್ನು ಆಯಾಋತು ಮಾನಕ್ಕೆ ಅನುಗುಣವಾಗಿ ಸೇವಿಸಿದಾಗ ಮಕ್ಕಳು ಹೆಚ್ಚಿನರೋಗ ನಿರೋಧಕ ಶಕ್ತಿಯೊಂದಿಗೆ ದಷ್ಟ ಪುಷ್ಟವಾಗಿ ಬೆಳವಣಿಗೆ ಹೊಂದಬಹುದು ಎಂದರು. 

ಶಿಕ್ಷಕಿ ಮಂಜುಳಾ ಮಾತನಾಡಿ ಮಕ್ಕಳಿಗೆ ದಿನನಿತ್ಯ ನಾವು ಉಪಹಾರ ಮತ್ತು ಊಟ ಮಾಡಿಸುವಾಗ ಹೆಚ್ಚಿನ ಸಂಖೈಯಲ್ಲಿ ಮಕ್ಕಳು ಬ್ರೇಡ, ಬನ್, ಕುರಕುರೇ, ಪಾಪಡೇ, ಗಾಟೆ, ಕರಿದ ಪದಾರ್ಥಗಳನ್ನು ತರುತ್ತಾರೆಆದ್ದರಿಂದ ಮಕ್ಕಳಿಗೆ ಇದರಿಂದಾಗುವ ಸಮಸ್ಯೆಗಳನ್ನು ತಿಳಿಸಲು ಈ ದಿನ ಸಹಾಯಕವಾಗಿದೆ ಎಂದರು. 

ಮಕ್ಕಳು ವಿವಿಧ ಬಗೆಯ ಹಣ್ಣುಗಳ ರೂಪಕವನ್ನು  ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ರಂಜಿತಾ ಮಾಡಿಕ, ಉಮಾಪೂಜಾರ, ಶ್ವೇತಾ ಹಿರೇಮಠ ಸೇರಿದಂತೆಇತರ ಶಿಕ್ಷಕ ಶಿಕ್ಷಕಿಯರು ಮತ್ತು ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ