ಜಮೀರ ಅಹ್ಮದ ಹುಟ್ಟು ಹಬ್ಬದ ನಿಮಿತ್ಯ ಹಣ್ಣು ಬ್ರೇಡ ವಿತರಣೆ
ಶಿಗ್ಗಾವಿ 02 : ಕರ್ನಾಟಕ ಸರ್ಕಾರದ ವಸತಿ, ಅಲ್ಪಸಂಖ್ಯಾತರ ಹಾಗೂ ವಕ್ಪ್ ಸಚಿವ ಬಿ. ಜೆಡ್. ಜಮೀಹ ಅಹ್ಮದಖಾನ ಅವರ 52ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಮಾಜಿ ಶಾಸಕ ಅಜ್ಜಂಪೀರ ಖಾದ್ರೀಯವರ ಅಭಿಮಾನಿ ಬಳಗದ ವತಿಯಿಂದ ಹಾವೇರಿ ಜಿಲ್ಲಾ ಆಸ್ಪತ್ರೆಯ ರೋಗಿ ನಿರೋಗಿಗಳಿಗೆ ಹಾಲು, ಬ್ರೇಡ್, ಹಣ್ಣುಗಳನ್ನು ಅಜ್ಜಂಪೀರ ಖಾದ್ರಿಯವರು ವಿತರಿಸಿದರು.
ವಿತರಿಸಿ ಮಾತನಾಡಿದ ಅವರು ನಮ್ಮ ಸಮಾಜದ ಪ್ರಭಾವಿ ನಾಯಕ ಜಮ್ಮೀರ ಅಹ್ಮದ ಖಾನ ದೇವರು ಅವರಿಗೆ ಆಯುಷ್ಯ ಅರೋಗ್ಯ ಕರುಣಿಸಲಿ ಹಾಗೂ ಇನ್ನೂ ಉನ್ನತ ಹುದ್ದೆಯನ್ನು ಅಲಂಕರಿಸಲಿ ಎಂದು ಹಾರೈಸಿದರು.
ಪುರಸಭೆ ಸದಸ್ಯೆ ವಸಂತಾ ಬಾಗೂರ, ಮುಖಂಡರಾದ ಮುಕ್ತಿಯಾರ ತಿಮ್ಮಾಪೂರ, ರಶೀದ ಗೋಟಗೋಡಿ, ಇರ್ಷಾದಹ್ಮದ ಪರೋಕಿ, ರವಿ ಕೋಣಪ್ಪನವರ ಸೇರಿದಂತೆ ತಾಲೂಕಿನ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.