ವಿದ್ಯಾರ್ಥಿಗಳ ಕನಸು ಸಾಕಾರಗೊಳಿಸುವ ದಾನಿಗಳಿಗೆ ಸನ್ಮತಿ ಸಮಿತಿ ವೇದಿಕೆ ನೀಡಿದೆ: ಶಶಿಕಾಂತ ಪುರಮವಾರ
ಸನ್ಮತಿ ಶಿಕ್ಷಣ ಸಮಿತಿಯ ಸ್ನೇಹ ಸಮ್ಮೇಳನ;
ಕಾಗವಾಡ 16: ಶಿಕ್ಷಣ ಕ್ಷೇತ್ರಕ್ಕೆ ದೇಣಗಿ ನೀಡಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಕನಸು ಸಾಕಾರಗೊಳಿಸುವ ದಾನಿಗಳಿಗೆ, ಸನ್ಮತಿ ಶಿಕ್ಷಣ ಸಂಸ್ಥೆ ವೇದಿಕೆ ಒದಗಿಸಿ, ದಾಣಿಗಳಿಂದ ದೇಣಿಗೆ ಪಡೆದು, ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡುತ್ತ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ ಎಂದು ಸಾಂಗಲಿ-ಕಾನಾಡವಾಡಿಯ ಕೃಷ್ಣಾ ಗೋದಾವರಿ ಗೊಬ್ಬರ-ಬೀಜ ಉತ್ಪಾದನೆ ಮತ್ತು ಮಾರಾಟ ಸಂಸ್ಥೆಯ ಎಂಡಿ ಶಶಿಕಾಂತ ಪುರಮವಾರ ತಿಳಿಸಿದ್ದಾರೆ.
ಅವರು, ರವಿವಾರ ದಿ. 15 ರಂದು ಸಂಜೆ ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಸನ್ಮತಿ ವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಗಡಿ ಭಾಗದಲ್ಲಿ ಸನ್ಮತಿ ಶಿಕ್ಷಣ ಸಂಸ್ಥೆಯು ಕಳೆದ 75 ವರ್ಷಗಳಿಂದ ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದು, ವೇದಿಕೆಯ ಮೇಲೆ ಉಪಸ್ಥಿತರಿರುವ ಬುಹುತೇಕ ಹಿರಿಯ ದಾನಿಗಳು ಈ ಶಾಲೆಯ ಹಳೆಯ ವಿದ್ಯಾರ್ಥಿಗಳೇ ಆಗಿದ್ದು, ಹೆಮ್ಮೆಯ ವಿಷಯವಾಗಿದೆ ಎಂದ ಅವರು ನಮ್ಮ ಕಂಪನಿಯಲ್ಲಿ ಪ್ರತಿ ವರ್ಷ ಈ ಶಾಲೆಯ 5 ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ, ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಮಿತಿಗೆ ದೇಣಗಿ ನೀಡುರವ ದಾನಿಗಳನ್ನು, ಗಣ್ಯರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಎಸ್ಎಸ್ಎಸ್ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ ವಹಿಸಿದ್ದರು.
ಅತಿಥಿಗಳಾಗಿ ರಾಯಬಾಗದ ಖ್ಯಾತ ಉದ್ಯಮಿ ಕೈಲಾಶ ಪುರಮವಾರ, ಭಾರತ ಇಲೇಕ್ಟ್ರಾನಿಕ್ಸ್ ಸಾಂಗಲಿಯ ಶಾಂಥಿನಾಥ ಪಾಲಗೌಡರ, ಸಂಗೀತಾ ಪಾಲಗೌಡರ, ಸಹಕಾರ ಪಟ್ಟಣದ ಬ್ಯಾಂಕುಗಳ ಮಹಾಮಂಡಳಿಯ ಮುಖ್ಯಕಾರ್ಯನಿರ್ವಾಹಕ ಪುಂಡಲೀಕ ಕೇರೂರೆ, ಬೇಬಿ ಕೇರೂರೆ, ಸಮಿತಿಯ ಉಪಾಧ್ಯಕ್ಷ ಅಜೀತ ನಾಂದ್ರೆ, ಆರ್.ವ್ಹಿ. ಸಂಗೋರಾಮ, ಸನ್ಮತಿ ಪಾಟೀಲ, ಪ್ರದೀಪ ಪಾಟೀಲ, ಮಹಾವೀರ ಮಾಲಗಾಂವೆ, ಅಜೀತ ನರಸಗೌಡರ, ನೀತೀನ ಪಾಟೀಲ, ದಾದಾ ಪಾಟೀಲ, ಅಶೋಕ ಯಂದಗೌಡರ, ಬಾಬಾಸಾಬ ನಾಂದ್ರೆ, ಅಣ್ಣಾಸಾಬ ಮಡಿವಾಳೆ, ಭರತೇಶ ಬಣಜಿಗವಾಡೆ, ರವೀಂದ್ರ ನಾಂದಣಿ, ಶೀತಲ ಮಾಲಗಾಂವೆ, ಅಣ್ಣಾಸಾಬ ಅರವಾಡೆ, ಪ್ರಕಾಶ ಮಾಳಿ, ಶ್ರೀಕಾಂತ ಮಡಿವಾಳೆ, ಶಶಿಕಾಂತ ಘೇನಪ್ಪಗೋಳ, ಸುರೇಂದ್ರ ಕಾಂಬಳೆ, ಮಹಾವೀರ ಪಾಟೀಲ, ವಿನೋದ ಪಾಟೀಲ, ಮಹೇಂದ್ರ ಕುಸನಾಳೆ, ಅಕ್ಕಾತಾಯಿ ಮುಜಾವರ ಸೇರಿದಂತೆ ಸಮಿತಿಯ ಎಲ್ಲ ಆಡಳಿತ ಮಂಡಳಿಯ ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ಗಣ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.