ರಾಣೆಬೆನ್ನೂರ

ದೇಶಪ್ರೇಮಿಗಳ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯ ದಕ್ಕಿದೆ: ಎಚ್‌.ಎಫ್‌.ಅಕ್ಕಿ

ದೇಶಪ್ರೇಮಿಗಳ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯ ದಕ್ಕಿದೆ: ಎಚ್‌.ಎಫ್‌.ಅಕ್ಕಿ

ರಾಣೇಬೆನ್ನೂರು,22:  ದೇಶದ ಸ್ವಾತಂತ್ರ್ಯಕ್ಕಾಗಿ, ಅಂದು ದೇಶಪ್ರೇಮಿಗಳು, ಸ್ವಾತಂತ್ರ್ಯ ಗಳಿಸಲು ತಮ್ಮ ಮನೆ,ಮಠ, ಕುಟುಂಬ ಆಸ್ತಿಪಾಸ್ತಿ ಮಾನ ಪ್ರಾಣ  ಕಳೆದುಕೊಂಡಿದ್ದಾರೆ ಸ್ವಾತಂತ್ರ್ಯ  ಇಂದು ಸ್ವಚ್ಛಂದ ವಾಗುತ್ತಿರುವುದು ದೇಶದ ದೊಡ್ಡ ದುರಂತದ ಸಂಗತಿಯಾಗಿದೆ ಎಂದು ನೀಡ್ಸ್‌  ಸಂಸ್ಥೆಯ  ಮುಖ್ಯ ಕಾರ್ಯನಿರ್ವಾಹಕ ಎಚ್‌. ಎಫ್ ಅಕ್ಕಿ ವಿಷಾದಿಸಿದರು.ಅವರು, ಇಲ್ಲಿನ ಸಂಗಮ್ ವೃತ್ತದಲ್ಲಿರುವ, ನೀಡ್ಸ್‌ ಕಚೇರಿ ಆವರಣದಲ್ಲಿ ಆರತಿಯ ವೈದ್ಯಕೀಯ ಸಂಸ್ಥೆ ಸಹಯೋಗದಲ್ಲಿ ನಡೆದ ದೇಶದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ಸಮಾನತೆ ಪ್ರತಿಯೊಬ್ಬರ ಹೊಣೆ ದೇಶದ ಅಭಿವೃದ್ಧಿಗೆ ಸರಕಾರ ಸಮಾಜ, ಸಂಘ ಸಂಸ್ಥೆಗಳು ಒಂದಾಗಿ ಒಗ್ಗಟ್ಟಾಗಿ ಶ್ರಮಿಸುವುದರ ಮೂಲಕ ಸಮಗ್ರ ಭಾರತದ ಬಲಿಷ್ಠ ತೆಗೆ ಮುಂದಾಗಬೇಕಾದ ಅಗತ್ಯವಿದೆ ಎಂದರು. 78ನೇ ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿದ ಐಎಂಎ ಅಧ್ಯಕ್ಷ ಡಾ:ಅಭಿನಂದನ್ ಸಾವಕಾರ್ ಅವರು ಸ್ವಾತಂತ್ರ್ಯ ಕುರಿತಂತೆ ಸಾಧ್ಯಂತವಾಗಿ ಮಾತನಾಡಿದರು.  ವೈದ್ಯಕೀಯ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ನೀಡ್ಸ್‌ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು 


ಸುದ್ದಿ ಓದಿ